ರಾಯಚೂರು: ವಿದ್ಯುತ್ ತಗುಲಿ ತಂದೆ ಮಗ ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ರಾತ್ರಿ ರಾಯಚೂರಿನ ದಿನ್ನಿ ಗ್ರಾಮದಲ್ಲಿ ನಡೆದಿದೆ. ಮಹೇಶ (47), ನವೀನ್ (16) ಮೃತರು.
ಮನೆ ಪಕ್ಕದಲ್ಲಿದ್ದ ಮರಕ್ಕೆ ವಿದ್ಯುತ್ ವೈರ್ ತಾಕಿದೆ. ಇದೇ ಮರಕ್ಕೆ ಬಟ್ಟೆ ನೇತಾಕಲು ವೈರ್ ಕಟ್ಟಲಾಗಿತ್ತು. ಜಿಟಿ ಜಿಟಿ ಮಳೆ ಸುರಿಯುತ್ತಿರುವ ಪರಿಣಾಮ ಮರಕ್ಕೆ ವಿದ್ಯುತ್ ಪ್ರವಹಿಸಿ ತಂತಿಗೂ ಅರ್ಥಿಂಗ್ ಆಗಿದೆ. ಬಟ್ಟೆ ತೆಗೆಯಲು ಹೋದ ತಂದೆ ಶಾಕ್ ನಿಂದ ಮೃತಪಟ್ಟಿದ್ದಾನೆ. ತಂದೆ ಕೆಳಗೆ ಬಿದ್ದಿರುವುದನ್ನು ಗಮನಿಸಿದ ಮಗ ಎಬ್ಬಿಸಲು ಹೋದಾಗ ಮಗನಿಗೂ ಶಾಕ್ ತಗುಲಿದೆ.
ಈ ಸಂಬಂಧ ಯರಗೇರಾ ಠಾಣೆಯಲ್ಲಿ ದೂರು ದಾಖಲಾಗಿದೆ.
Laxmi News 24×7