Breaking News

ಪತ್ನಿಗೆ ಕೊರೊನಾ ಬಂತೆಂದು ಗಂಡ ಪರಾರಿ,ಸ್ಥಳೀಯ ಕಾರ್ಪೋರೇಟರ್ ಶಿವರಾಜ್ ಸಹಾಯದಿಂದ ಅಂತ್ಯಕ್ರಿಯೆ

Spread the love

ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಗೆ ಕೊರೊನಾ ಬಂತೆಂದು ಗಂಡ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪತ್ನಿಯ ಅಂತ್ಯಕ್ರಿಯೆಗೂ ಬಾರದ ಪತಿ

 

ಬೆಂಗಳೂರು: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಗೆ ಕೊರೊನಾ ಬಂತೆಂದು ಗಂಡ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಶಂಕರಮಠ ವಾರ್ಡ್ ಜೆ.ಸಿ ನಗರದಲ್ಲಿ ವಾಸಿಸುತ್ತಿದ್ದ ದಂಪತಿ 2 ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಪತಿ ಕಾರು ಚಾಲಕ, ಪತ್ನಿ ಮಾಲ್ ವೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ರು. ಕಳೆದ 4-5 ದಿನಗಳಿಂದ ಪತ್ನಿಗೆ ಆರೋಗ್ಯ ಹದಗೆಟ್ಟಿತ್ತು. ಪರೀಕ್ಷೆ ಮಾಡಿಸಿದಾಗ ಮಹಿಳೆಗೆ ಪಾಸಿಟಿವ್ ಇರೋದು ಗೊತ್ತಾಗಿದೆ. ಇದರಿಂದ ತನಗೂ ಕೊರೊನಾ ಬಂದು ಬಿಡುತ್ತೆ ಎಂಬ ಭಯಕ್ಕೆ ರಾತ್ರಿಯೇ ಪತಿ ಮನೆ ಬಿಟ್ಟು ಪರಾರಿ ಆಗಿದ್ದಾನೆ.

ಇತ್ತ ಕೊರೊನಾ ಸೋಂಕಿನಿಂದಲೇ ಮಹಿಳೆ ಸಾವನ್ನಪ್ಪಿದ್ದಾರೆ. ಕಡೇ ಪಕ್ಷ ಪತ್ನಿಯ ಅಂತ್ಯಕ್ರಿಯೆಗೂ ಪತಿ ಬಂದಿಲ್ಲ. ಬಳಿಕ ಸ್ಥಳೀಯ ಕಾರ್ಪೋರೇಟರ್ ಶಿವರಾಜ್ ಸಹಾಯದಿಂದ ಅಂತ್ಯಕ್ರಿಯೆ ಮಾಡಲಾಗಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ