Breaking News

ಚಿಕ್ಕೋಡಿಯ ಗಣ್ಯ ವ್ಯಕ್ತಿರೋರ್ವರಿಗೆ ಕೋವಿಡ್ ಪಾಸಿಟಿವ್: ಬೆಚ್ಚಿಬೀಳಿಸಿದ ಟ್ರಾವೆಲ್ ಹಿಸ್ಟರಿ

Spread the love

ಚಿಕ್ಕೋಡಿ: ನಗರದಲ್ಲಿ ಸಕ್ರಿಯವಾಗಿದ್ದ ಗಣ್ಯ ವ್ಯಕ್ತಿಯೋರ್ವರಿಗೆ ಕೋವಿಡ್-19 ಸೋಂಕು ತಗುಲಿದ್ದು, ಚಿಕ್ಕೋಡಿ ನಗರದ ಜನರನ್ನು ಬೆಚ್ಚಿ ಬೀಳಿಸಿದೆ.

ಚಿಕ್ಕೋಡಿ ನಗರದ ಸಾಯಿ ಮಂದಿರ ಹತ್ತಿರ ಇರುವ ಓರ್ವ ಗಣ್ಯ ವ್ಯಕ್ತಿಗೆ ಶುಕ್ರವಾರ ಕೋವಿಡ್ ಪಾಸಿಟಿವ್ ಆಗಿರುವುದು ದೃಢವಾಗಿದೆ. ಪಾಸಿಟಿವ್ ಬಂದಿರುವ ಈ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಪುರಸಭೆ ಆವರಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ನಗರದ ಜನ ಮತ್ತಷ್ಟು ಭೀತಿಗೆ ಒಳಗಾಗಿದ್ದಾರೆ.

ಹಾಲಿ ಪುರಸಭೆ ಸದಸ್ಯರು, ಪುರಸಭೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಇವರ ಸಂಪರ್ಕಕ್ಕೆ ಬಂದಿದ್ದಾರೆ. ಚಿಕ್ಕೋಡಿ ಲಾಕ್ ಡೌನ್ ಮತ್ತು ಅನ್ ಲಾಕ್ ವೇಳೆ ಸಾರ್ವಜನಿಕ ಸಭೆಯಲ್ಲಿ ಫ್ರಂಟ್ ಲೈನ್ ದಲ್ಲಿ ಇರುವ ಈ ವ್ಯಕ್ತಿ ಟ್ರಾವೆಲಿಂಗ್ ಹಿಸ್ಟರಿ ನಗರದ ಗಣ್ಯಾತಿಗಣ್ಯರಲ್ಲಿ ಭೀತಿ ಹುಟ್ಟಿಸಿದೆ.  ಪಾಸಿಟಿವ್ ಬಂದಿರುವ ಗಣ್ಯ ವ್ಯಕ್ತಿ ಬೆಳಗಾವಿ ಕೆಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಜೊತೆ ಸಂಪರ್ಕದಲ್ಲಿ ಎಷ್ಟು ಜನರು ಇದ್ದಾರೆ ಎಂಬುದು ತಾಲೂಕಾಡಳಿತ ಮಾಹಿತಿ ಕಲೆ ಹಾಕುತ್ತಿದೆ.


Spread the love

About Laxminews 24x7

Check Also

ಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ

Spread the loveಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌  ಅವರ ಮತವನ್ನು ಅಸಿಂಧುಗೊಳಿಸಬೇಕೆಂಬ ಕಾಂಗ್ರೆಸ್‌ ಆಕ್ಷೇಪವನ್ನ ಚುನಾವಣಾಧಿಕಾರಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ