ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ಗೆ ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಹೈಕೋರ್ಟ್ ಅನುಮತಿ ನೀಡಿದೆ.
ಹೈಕೋರ್ಟ್ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿದ್ದು, ಇಪ್ಪತ್ತು ದಿನಗಳ ಕಾಲ ಪ್ರದೋಷ್ ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಕೊಡುವಂತೆ ಕೋರಿದ್ದರು. ಇದಕ್ಕೆ ದರ್ಶನ್ ಪರ ವಕೀಲರು, ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅವಕಾಶ ನೀಡದಂತೆ ಮನವಿ ಮಾಡಿದ್ದರು. ಇಂದು ಎರಡು ಕಡೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ನ.7 ರಿಂದ ನ.12 ರವರೆಗೆ ಪಿತೃಕಾರ್ಯದಲ್ಲಿ ಭಾಗವಹಿಸಲು ಅನುಮತಿ ನೀಡಿದೆ.
ಪ್ರತಿದಿನ ಬೆಳಗ್ಗೆ 8 ಗಂಟೆಗೆ ಜೈಲಿನಿಂದ ಕರೆತಂದು ಸಂಜೆ 6 ಗಂಟೆಗೆ ಜೈಲಿಗೆ ಕರೆದೊಯ್ಯಬೇಕು. ಜೈಲಿನಿಂದ ಕರೆತರುವಾಗ ನಗರ ಸಶಸ್ತ್ರ ರಿಸರ್ವ್ ಪೊಲೀಸ್ ಬೆಂಗಾವಲು ನೀಡಬೇಕು. ಪಿತೃಕಾರ್ಯಕ್ಕೆ ಬರುವ ವ್ಯಕ್ತಿಗಳ ಹೆಸರು, ಪಿತೃಕಾರ್ಯಕ್ಕೆ ಬರುವ ಪುರೋಹಿತರ ಹೆಸರನ್ನೂ ನೀಡಬೇಕು. ಕೇಸ್ಗೆ ಸಂಬಂಧಿಸಿದವರ ಭೇಟಿ, ಸಂಪರ್ಕಕ್ಕೆ ಅವಕಾಶ ನೀಡಬಾರದು ಅಂತಾ ಆದೇಶದಲ್ಲಿ ಉಲ್ಲೇಖ ಮಾಡಿ ಅನುಮತಿ ನೀಡಲಾಗಿದೆ.
Laxmi News 24×7