Breaking News

2 ಕೋಟಿ ಲಂಚ ಕೇಳಿದ ಆರೋಪ ಕೇಸ್‌ – ಜ್ಞಾನೇಶ್‌ ಕುಮಾರ್‌ ವಿರುದ್ಧ ತನಿಖೆಗೆ ಕೇರಳ ಸರ್ಕಾರ ಆದೇಶ

Spread the love

ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಲಂಚದ ಆರೋಪಗಳ ತನಿಖೆಗೆ ಕೇರಳ ಸರ್ಕಾರ  ಆದೇಶ ಹೊರಡಿಸಿದೆ.

ಸುಮಾರು 20 ವರ್ಷಗಳ ಹಿಂದೆ ಕೇರಳದ ಸಾರ್ವಜನಿಕ ನಿರ್ಮಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಜ್ಞಾನೇಶ್ ಕುಮಾರ್ ರಸ್ತೆ ಯೋಜನೆ ಬಿಲ್ ಮಂಜೂರು ಮಾಡಲು 2 ಕೋಟಿ ಲಂಚ ಕೇಳಿದ ಆರೋಪ ಇದಾಗಿದೆ.

2 ಕೋಟಿ ರೂ. ಲಂಚಕ್ಕಾಗಿ 17 ಕೋಟಿ ಮೌಲ್ಯದ ಅನುಮೋದಿತ ಬಿಲ್‌ಗಳನ್ನು ತಡೆಹಿಡಿಯಲಾಗಿತ್ತು ಅಂತ ಕೊಲ್ಲಂ ಜಿಲ್ಲೆಯ ಗುತ್ತಿಗೆದಾರರಾದ ಸಾಜನ್ ಎಂಬುವವರು ವಿಜಿಲೆನ್ಸ್ ಇಲಾಖೆಗೆ ದೂರು ನೀಡಿದ್ದರು.

ಬಿಲ್‌ಗಳಿಗೆ ಎಂಜಿನಿಯರ್‌ಗಳು ಅನುಮೋದನೆ ನೀಡಿದ್ದರೂ ಜ್ಞಾನೇಶ್ ಕುಮಾರ್ ಚೆಕ್‌ಗಳನ್ನು ತಡೆಹಿಡಿದಿದ್ದರು. ಲಂಚ ನೀಡದ ಹೊರತು ಚೆಕ್‌ಗಳನ್ನ ಬಿಡುಗಡೆ ಮಾಡಲು ಜ್ಞಾನೇಶ್ ಕುಮಾರ್ ನಿರಾಕರಿಸುತ್ತಿದ್ದಾರೆ ಎಂದು ಮಲೇಷ್ಯಾ ಮೂಲದ ಕಂಪನಿಯ ಯೋಜನಾ ಎಂಜಿನಿಯರ್ ‘ಲೀ ಸೀ ಬೀನ್’ ನಮಗೆ ತಿಳಿಸಿದ್ದರು.

ಈ ಸಮಸ್ಯೆಯನ್ನು ಬಗೆಹರಿಸಲು ತಾನು ಹಣದ ವ್ಯವಸ್ಥೆ ಮಾಡಿಕೊಡುವುದಾಗಿ ಸಾಜನ್ ಪ್ರಸ್ತಾಪಿಸಿದರೂ, ಕಂಪನಿಯ ಅಧಿಕಾರಿಗಳು ಲಂಚ ನೀಡಲು ನಿರಾಕರಿಸಿದರು. ಕೊನೆಗೆ ಬೆಂಗಳೂರಿನಲ್ಲಿರುವ ಕಂಪನಿಯ ಮತ್ತೊಂದು ಯೋಜನೆಯಿಂದ ‘ಲೀ ಸೀ ಬೀನ್’ ಹಣದ ವ್ಯವಸ್ಥೆ ಮಾಡಿದ್ದರು ಅಂತ ಸಾಜನ್ ವಿವರಿಸಿದ್ದರು.


Spread the love

About Laxminews 24x7

Check Also

ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಬೆದರಿಕೆ – ಬೆಂಗಳೂರಿನ ಟೆಕ್ಕಿ ಬಂಧನ

Spread the loveಬೆಂಗಳೂರು: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್  ಹೆಸರಿನಲ್ಲಿ‌ ಹಲವು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬೆಂಗಳೂರಿನ ಟೆಕ್ಕಿಯೊಬ್ಬನನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ