Breaking News

ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಶುಭಾರಂಭ; ಇವ್ರೇ ನೋಡಿ ಈ ಬಾರಿ ಮನೆಯೊಳಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳು

Spread the love

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್‌ 13 ಅದ್ಧೂರಿಯಾಗಿ ಆರಂಭವಾಗಿದೆ. ಗ್ರ್ಯಾಂಡ್‌ ಓಪನಿಂಗ್‌ನಲ್ಲಿ ಒಬ್ಬೊಬ್ಬರಾಗಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ, ಕಿರುತೆರೆ, ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಚಿತ ಮುಖಗಳು ಈ ಬಾರಿ ಬಿಗ್‌ಬಾಸ್ ಮನೆಯಲ್ಲಿದ್ದಾರೆ.

ಈ ಬಾರಿ ಸ್ಪರ್ಧಿಗಳ ಎಂಟ್ರಿ ಕೂಡ ವಿಭಿನ್ನವಾಗಿತ್ತು. ಕೆಲವರು ಟಾಸ್ಕ್‌ ಮೂಲಕ, ಇನ್ನು ಕೆಲವರು ತಮ್ಮದೇ ಸ್ಟೈಲ್‌ನಲ್ಲಿ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಕಿಚ್ಚ ಸುದೀಪ್‌ ಜೊತೆ ಸ್ಟೇಜ್‌ ಹಂಚಿಕೊಂಡು, ತಮ್ಮ ಬಗ್ಗೆ ಹಾಗೂ ಬಿಗ್‌ಬಾಸ್‌ ಆಟದ ಬಗ್ಗೆ ಸ್ಪರ್ಧಿಗಳು ಮಾತನಾಡಿದ್ದಾರೆ.

ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು

1. ಜಗ್ಗ ಮಮ್ಮಿ ಅಲಿಯಾಸ್‌ ಜಗದೀಶ್‌
ತಮ್ಮದೇ ಆದ ಮಾತಿನ ಶೈಲಿಯಿಂದ ಗಮನ ಸೆಳೆದಿರುವ ಜಗದೀಶ್‌ ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಮೃದು ಮಾತಿನಿಂದ ಮೊದಲಿಗೆ ಫ್ಲೈಟ್‌ ಹತ್ತಿದ್ದಾರೆ.

2. ಸೌಂದರ್ಯ ಶೆಟ್ಟಿ
ಮಾಡೆಲಿಂಗ್‌ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಂಗಳೂರಿನ ಮೂಲದ ಸೌಂದರ್ಯ ಶೆಟ್ಟಿ ಕೂಡ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಗ್ಲಾಮರಸ್‌ ಲುಕ್‌ ಮೂಲಕ ಪಡ್ಡೆ ಹುಡುಗರ ಮನಸ್ಸು ಕದಿಯಲು ಸಜ್ಜಾಗಿದ್ದಾರೆ.

3. ಅವಿನಾಶ್ ಶತಮರ್ಷನ
ಅವಿನಾಶ್ ಶತಮರ್ಷನ (ಶತಮರ್ಷನ್ ಅವಿನಾಶ್) ಅವರು ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಖ್ಯಾತ ಯುವ ನಟ, ನಿರ್ದೇಶಕ ಮತ್ತು ಬರಹಗಾರರಾಗಿದ್ದಾರೆ. ತಮ್ಮದೇ ಆದ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿರುವ ಅವಿನಾಶ್‌ ಈ ಬಾರಿ ಬಿಗ್‌ಬಾಸ್‌ ಮನೆಯ ಸ್ಪರ್ಧಿಯಾಗಿದ್ದಾರೆ.

4. ಪ್ರಥಮಾ ಪ್ರಸಾದ್‌
ಹಿರಿಯ ನಟಿ ವಿನಯಾ ಪ್ರಸಾದ್‌ ಮಗಳು ಪ್ರಥಮಾ ಪ್ರಸಾದ್‌ ಕಿರುತೆರೆಯಲ್ಲಿ ಪರಿಚಿತ ಮುಖವಾಗಿದ್ದಾರೆ. ಈಗ ಇವರು ಬಿಗ್‌ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದಾರೆ.

5. ಗಗನ್‌ ಚಿನ್ನಪ್ಪ
ನಾನು ಸಖತ್‌ ಮನರಂಜನೆ ನೀಡುತ್ತೇನೆ ಎಂದು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಗಗನ್‌ ಚಿನ್ನಮ್, ತಮ್ಮ ಮಾತು ಹಾಗೂ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದಾರೆ. ʼಮಂಗಳಗೌರಿ ಮದುವೆʼ, ʼಸೀತಾರಾಮ ಕಲ್ಯಾಣʼ ಧಾರಾವಾಹಿ ಮೂಲಕ ಮನೆಮಾತಾಗಿದ್ದಾರೆ.

6. ಸಂಗೀತಾ ಭಟ್‌
ಕನ್ನಡದ ನಟಿ ಸಂಗೀತಾ ಭಟ್‌ ಕೂಡ ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳ ಪಟ್ಟಿಗೆ ಸೇರಿದ್ದಾರೆ. ಅವರು ತಮ್ಮ ಬೋಲ್ಡ್‌ ಫೊಟೋಗಳ ಮೂಲಕ ಎಲ್ಲರ ಗಮನ ಸೆಳೆದಿದ್ದು, ಈಗ ಬಿಗ್‌ ಬಾಸ್ ಮನೆಯಲ್ಲಿ ಇವರ ಆಟ ಹೇಗಿರುತ್ತೆ ಎಂದು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

7. ಕಾವ್ಯ ಗೌಡ
ಭಾಗ್ಯಲಕ್ಷ್ಮೀ ಧಾರಾವಾಹಿಯ ವಿಲನ್‌ ಶ್ರೇಷ್ಠಾ ಎಂದೇ ಫೇಮಸ್‌ ಅಗಿರುವ ಕಾವ್ಯ ಗೌಡ ಕೂಡ ಈಗ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿರುವ ಕಾವ್ಯ ಗೌಡ ಕೂಡ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

8. ಓಂ ಪ್ರಕಾಶ್‌
ಕನ್ನಡ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ಬಿಗ್‌ಬಾಸ್‌ ಮನೆಗೆ ಎರಡನೇಯದಾಗಿ ಎಂಟ್ರಿ ಕೊಟ್ಟಿದ್ದಾರೆ.

10. ಕಿರಣ್‌ ಶಾಸ್ತ್ರಿ
ಉತ್ತರ ಕರ್ನಾಟಕದ ಜವಾರಿ ಮಾತು, ನೇರ ಮಾತು ಹಾಗೂ ವಿಭಿನ್ನ ವ್ಯಕ್ತಿತ್ವದಿಂದ ಗಮನ ಸೆಳೆದಿರುವ ಕಿರಣ್‌ ಶಾಸ್ತ್ರಿ, ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

10. ಆಸಿಯಾ ಫಿರ್ದೋಸ್‌
ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಮೂಲಕ ಚಿರಪರಿಚಿತರಾದ ಕಿರುತೆರೆ ನಟಿ ಆಸಿಯಾ ಫಿರ್ದೋಸ್‌ ಕೂಡ ಈ ಬಾರಿ ಬಿಗ್‌ಬಾಸ್‌ ಮನೆಯ ಆಟಕ್ಕೆ ಕಾಲಿಟ್ಟಿದ್ದಾರೆ. ಅವರ ಕ್ಯೂಟ್‌ ಲುಕ್‌ ಎಲ್ಲರ ಗಮನ ಸೆಳೆದಿದೆ.

11. ಲಿಖಿತ್‌ ಗೋಂದಿ
ಬಿಗ್‌ಬಾಸ್‌ ಅಗ್ನಿಪರೀಕ್ಷೆಯಿಂದ ಗೆದ್ದು ಮನೆಯೊಳಗೆ ಎಟ್ರಿ ಕೊಟ್ಟ ಎರಡನೇ ಸ್ಪರ್ಧಿ ಲಿಖಿತ್‌ ಗೋಂದಿ ಆಗಿದ್ದಾರೆ.

12. ತಾಂಡವ್‌ ರಾಮ್‌
ಕುಸ್ತಿ ಪಟು ಆಗಿರುವ ತಾಂಡವ್‌ ರಾಮ್‌ ಜೋಡಿ ಹಕ್ಕಿ ಧಾರಾವಾಹಿ ಮೂಲಕ ಸೀರಿಯಲ್‌ ಹೀರೋ ಆಗಿ ಮೆರೆದವರು. ಈಗ ಬಿಗ್‌ಬಾಸ್‌ ಮನೆಗೂ ಎಂಟ್ರಿ ಕೊಟ್ಟಿದ್ದು, ಅವರ ಆಟ ನೋಡಲು ಜನ ಕಾತರರಾಗಿದ್ದಾರೆ.

13. ವೈಷ್ಣವಿ ಕೌಂಡಿನ್ಯ
ಇವರು ಕಲರ್ಸ್ ಕನ್ನಡ ವಾಹಿನಿಯ ‘ಮಿಥುನ ರಾಶಿ’ ಹಾಗೂ ಉದಯ ಟಿವಿ ಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ರೇಮ ಕಾವ್ಯ’ (Prema Kavya) ಸೇರಿದಂತೆ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ವೀಕ್ಷಕರಿಗೆ ಪರಿಚಿತರಾಗಿದ್ದಾರೆ. ವೈಷ್ಣವಿ ವಿ ಕೌಂಡಿನ್ಯ ಅವರು ಪ್ರಸ್ತುತ ಬಿಗ್ ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋನಲ್ಲಿ 13ನೇ ಸ್ಪರ್ಧಿಯಾಗಿ ಭಾಗವಹಿಸುತ್ತಿರುವ ಪ್ರಸಿದ್ಧ ಕಿರುತೆರೆ ನಟಿಯಾಗಿದ್ದಾರೆ

14. ಧನುಷ್‌ ಮಂಜುನಾಥ್‌
ಬಿಗ್ ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಯಾಗಿದ್ದು, ಅಗ್ನಿಪರೀಕ್ಷೆಯಿಂದ ಎಂಟ್ರಿ ಕೊಟ್ಟ ಮೂರನೇ ವ್ಯಕ್ತಿಯಾಗಿದ್ದಾರೆ.

15. ಯಶಸ್‌ ಕೃಷ್ಣ
ಬಿಗ್ ಬಾಸ್ ಶೋಗೆ 15ನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇವರು ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿ ‘ಪವಿತ್ರ ಬಂಧನ’ (Pavithra Bandhana) ನಲ್ಲಿ ‘ತಿಲಕ್ ದೇಶ್‌ಮುಖ್’ ಎಂಬ ಪ್ರಮುಖ ಪಾತ್ರದ ಮೂಲಕ ಇವರು ಕಿರುತೆರೆ ವೀಕ್ಷಕರಿಗೆ ಬಹಳ ಹತ್ತಿರವಾಗಿದ್ದಾರೆ. ಇವರ ನಟನೆ ಮತ್ತು ಹ್ಯಾಂಡ್ಸಮ್ ಲುಕ್‌ಗೆ ಅಪಾರ ಅಭಿಮಾನಿ ಬಳಗವಿದೆ.

16. ಕವಿ ಮಂಜುನಾಥ್‌
ಇನ್ನು 16ನೇ ಸ್ಪರ್ಧಿಯಾಗಿ ಅಗ್ನಿ ಪರೀಕ್ಷೆಯ ಜ್ಯೂರಿ ಆಯ್ಕೆ ಮಾಡಿದ ಸ್ಪರ್ಧಿ ಮಾಡ್ರನ್‌ ಕವಿ ಮಂಜುನಾಥ್‌ ಎಂಟ್ರಿ ಕೊಟ್ಟಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಈ ಎಲ್ಲಾ ಸ್ಪರ್ಧಿಗಳ ಆಟ ಹೇಗಿರಲಿದೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಯಾರು ತಮ್ಮ ಮಾತಿನಿಂದ ಗಮನ ಸೆಳೆಯುತ್ತಾರೆ? ಯಾರು ಟಾಸ್ಕ್‌ಗಳಲ್ಲಿ ಮಿಂಚುತ್ತಾರೆ? ಯಾರು ಮನೆಯೊಳಗೆ ಕಿರಿಕ್‌ ಮಾಡಿಕೊಂಡು ಸುದ್ದಿಯಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಅಂತೂ ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಆಟ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಮನೆಯೊಳಗಿನ ಸ್ನೇಹ, ಜಗಳ, ಟಾಸ್ಕ್‌ ಹಾಗೂ ಎಲಿಮಿನೇಷನ್‌ಗಳು ಮತ್ತಷ್ಟು ಕುತೂಹಲ ಮೂಡಿಸುವ ಸಾಧ್ಯತೆಯಿದೆ.


Spread the love

About Laxminews 24x7

Check Also

ತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳು

Spread the loveಗದಗ: ತಗಡಿನ ಮನೆಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ