Breaking News

ಅಹಿಂದ ದಾಳ ಉರುಳಿಸಿದ ಸಿದ್ದರಾಮಯ್ಯ – ಸಮಾವೇಶಕ್ಕೆ ಜಾರಕಿಹೊಳಿಗೆ ಆಹ್ವಾನವೇ ಇಲ್ಲ

Spread the love

ಬೆಂಗಳೂರು: ಇಲ್ಲಿನ ಅರಮನೆ ಮೈದಾನದಲ್ಲಿ ಅಹಿಂದ ಕಹಳೆ ಮೊಳಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಅಹಿಂದ ಚಳುವಳಿಗೆ 25 ವರ್ಷ ಪೂರ್ಣ ಹಿನ್ನಲೆ ಇಂದು ಅರಮನೆ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ  ಅಭಿನಂದನೆ ಮಾಡಲಾಯಿತು. ಆದರೆ ಅಹಿಂದ ಚಳುವಳಿಯಲ್ಲಿ ಸಿದ್ದರಾಮಯ್ಯಗೆ ಬೆನ್ನೆಲುಬಾಗಿ ನಿಂತಿದ್ದ ಸತೀಶ್ ಜಾರಕಿಹೊಳಿಗೆ ಮಾತ್ರ ಇಂದಿನ ಸಮಾವೇಶಕ್ಕೆ ಆಹ್ವಾನ ನೀಡಿರಲಿಲ್ಲ.

ಹೌದು, ಸಿದ್ದರಾಮಯ್ಯ-ಸತೀಶ್ ಜಾರಕಿಹೊಳಿ ಒಂದು ಕಾಲದಲ್ಲಿ ಗುರು-ಶಿಷ್ಯರು. ಅಹಿಂದ ಆರಂಭಿಸಿದ್ದಾಗ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದು ಇದೇ ಸತೀಶ್ ಜಾರಕಿಹೊಳಿ. ಅಹಿಂದ ಬಾವುಟ ಹಿಡಿಯೋಕೆ ಸಿದ್ದು ಕೈಗಳಿಗೆ ಶಕ್ತಿ ತುಂಬಿದ್ದು, ತೆನೆ ಇಳಿಸಿ ಕೈ ಹಿಡಿಯಲು ಹೊರಟಾಗ ಸಾಥ್ ಕೊಟ್ಟಿದ್ದು ಸತೀಶ್ ಜಾರಕಿಹೊಳಿ. ಆನಂತರ ಸಿಎಂ ಆಗುವವರೆಗೂ ಪ್ರತಿ ಹಂತದಲ್ಲೂ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯಗೆ ಸಾಥ್ ನೀಡಿದ್ದರು. ಆದ್ರೀಗ ಇಬ್ಬರ ನಡುವೆ ಕಂದಕ ಮೂಡಿದೆ. ಇಬ್ಬರ ನಡುವಿನ ಸ್ನೇಹ ಸಂಬಂಧ ಹಳಸಿ ಹೋಗಿದೆ. ಅಧಿಕಾರ ಹಸ್ತಾಂತರ ಬಳಿಕ ಇಬ್ಬರ ದಿಕ್ಕು ಬೇರೆ ಬೇರೆಯಾಗಿದೆ. ಆಗ ಖಾಸಾ ಆಗಿದ್ದವರು ಇದೀಗ ನಾನೊಂದು ತೀರ, ನೀನೊಂದು ತೀರ ಎಂಬಂತೆ ಆಗಿದ್ದಾರೆ.

ಬಿರುಕು ಬಗ್ಗೆ ಇತ್ತೀಚೆಗೆ ಸತೀಶ್ ಜಾರಕಿಹೊಳಿ ಸಹ ಒಪ್ಪಿಕೊಂಡಿದ್ದರು. ಸಿದ್ದರಾಮಯ್ಯ ಅಹಿಂದ ಚಳುವಳಿಗೆ ಬೆನ್ನೆಲುಬಾಗಿ ನಿಂತಿದ್ದ ಸತೀಶ್ ಜಾರಕಿಹೊಳಿ ಜೊತೆಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪಗೂ ಅಹಿಂದ ಸಮಾವೇಶಕ್ಕೆ ಆಹ್ವಾನ ಇರಲಿಲ್ಲ. ಆಹ್ವಾನ ಕೊಡದೆ ಅಹಿಂದ ರಜತ ಮಹೋತ್ಸವ ಆಚರಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸತೀಶ್ ಜಾರಕಿಹೊಳಿ ಸಮಾವೇಶಕ್ಕೆ ನನ್ನನ್ನು ಕರೆದಿಲ್ಲ. ಹಾಗಾಗಿ ನಾನು ಹೋಗಿಲ್ಲ ಎಂದಿದ್ದಾರೆ.

ಇತ್ತ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಯಸ್ಸಾದ ಕಾರಣಕ್ಕೆ ನಾನು ಚುನಾವಣೆಯಿಂದ ಹಿಂದೆ ಸರಿದಿಲ್ಲ. ಇವತ್ತು ಚುನಾವಣಾ ವ್ಯವಸ್ಥೆ ಬಹಳ ದುಬಾರಿಯಾಗಿದೆ. ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ನಿಮ್ಮ ಜೊತೆಗಿದ್ದು ಹೋರಾಟ ಮಾಡುತ್ತೀನಿ ಎಂದರು. ಮುಂದಿನ ಚುನಾವಣೆಗೆ ಸ್ಪರ್ಧಿಸಬೇಕು ಅಂತ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಸಿದ್ದರಾಮಯ್ಯಗೆ ಆಗ್ರಹಿಸಿದ್ರು. ಅಹಿಂದ ಹಾಗೂ ಕಾಂಗ್ರೆಸ್ ಸಿದ್ಧಾಂತ, ರಾಹುಲ್ ಗಾಂಧಿ ಸಿದ್ಧಾಂತ ಒಂದೇ ಅಂತ ಸಿಎಂ ಡಿಕೆಶಿ ಪ್ರತಿಪಾದಿಸಿದರು.


Spread the love

About Laxminews 24x7

Check Also

ತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳು

Spread the loveಗದಗ: ತಗಡಿನ ಮನೆಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ