ಬೆಂಗಳೂರು: ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ಹಗರಣ ಪ್ರಕರಣದಲ್ಲಿ ಸಿಐಡಿ ತನಿಖೆ ಚುರುಕುಗೊಂಡಿದ್ದು, ಪ್ರಮುಖ ಆರೋಪಿಗಳಾದ ಬಸವರಾಜ್ ಕನ್ನಾಳಿ ಹಾಗೂ ಗ್ಯಾನೇಂದ್ರಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗಿದೆ.
ಈ ಬೆನ್ನಲ್ಲೇ ಹಗರಣದಲ್ಲಿ ಭಾಗಿಯಾಗಿದ್ದ 10 ಅಭ್ಯರ್ಥಿಗಳು ಅಪ್ರೂವರ್ ಆಗಲು ಸಿದ್ಧವಿದ್ದು, ಸಿಐಡಿ ಮುಂದೆ ತಮ್ಮ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲು ಸಿದ್ಧರಾಗಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಭ್ಯರ್ಥಿಗಳ ಅಪ್ರೂವರ್ ಹೇಳಿಕೆಯನ್ನ ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಅಕ್ರಮದ ಗುಟ್ಟು ರಟ್ಟು ಮಾಡುತ್ತಿರುವ ಅಭ್ಯರ್ಥಿಗಳಲ್ಲಿ ಇದೀಗ ತಪ್ಪೊಪ್ಪಿಗೆ ನೀಡಲು ಪೈಪೋಟಿ ಶುರುವಾಗಿದೆ. ಆದರೆ, ಪ್ರಕರಣದಲ್ಲಿ ಭಾಗಿಯಾದ ಎಲ್ಲ ಅಭ್ಯರ್ಥಿಗಳನ್ನು ಅಪ್ರೂವರ್ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದ ಸಿಐಡಿ, ಈ ಕುರಿತು ಕಾನೂನು ತಜ್ಞರ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
Laxmi News 24×7