ಚಿಕ್ಕೋಡಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಾಲತವಾಡಿಯಲ್ಲಿ ಸಭೆ ನಡೆಸಿದ್ದ ಸ್ಥಳದಲ್ಲಿ ಬಿಜೆಪಿ ನಾಯಕರು ಹೋಮ-ಹವನ ನಡೆಸಿ, ಸ್ಥಳವನ್ನು ಶುದ್ಧೀಕರಣ ಮಾಡಿರುವ ಕೃತ್ಯವನ್ನು ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಂಸದರ ಕಚೇರಿ ಬಳಿಯಿಂದ ಇಂದಿರಾನಗರ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಿಪ್ಪಾಣಿ ಮುಧೋಳ ರಸ್ತೆ ತಡೆದು, ಮಾನವ ಸರಪಳಿ ನಿರ್ಮಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಸಭೆ ನಡೆಸಿದ ಸ್ಥಳವನ್ನು ಬಿಜೆಪಿ ಶುದ್ಧೀಕರಣ ಮಾಡಿರುವುದು ಅತ್ಯಂತ ಖಂಡನೀಯ. ಹಾಗೂ ಅವರ ಕೀಳುಮಟ್ಟದ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕಿಡಿಕಾರಿದರು.ರಾಹುಲ್ ಗಾಂಧಿ ಮೇಲೆ ಹಾಕಿರುವ ಎಫ್‌ಐಆರ್ ಹಿಂದಕ್ಕೆ ತಗೆದುಕೊಳ್ಳಬೇಕು ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಣ್ಣಾಸಾಹೇಬ ಹವಲೆ,ಸಂಜು ಕಾಂಬಳೆ,ಕೃಷ್ಣಾ ಜೂಗುಳೆ,ಗಣೇಶ ಮೋಹಿತೆ,ನಾಮದೇವ ಕಾಂಬಳೆ,ಶAಕರಗೌಡ ಪಾಟೀಲ,ರಾಜು ಕೋಟಗಿ, ಸಿದ್ದಿಕ ಅಂಕಲಗಿ,ಎಚ್.ಎಸ್.ನಸಲಾಪೂರೆ,ರಾಜೇಶ ಕದಮ,ನಿರ್ಮಲಾ ಪಾಟೀಲ,ಕರೆಪ್ಪ ಇಟನಾಳೆ,ರೋಹಿತ ಮುಕುಂದ ಇತರರಿದ್ದರು.
Laxmi News 24×7