Breaking News

ರೀಲ್ಸ್‌ಗಾಗಿ 3000 ಅಡಿ ಎತ್ತರದ ಬೆಟ್ಟದ ತುದಿಗೆ ಥಾರ್‌ ಕೊಂಡೊಯ್ದು ಹುಚ್ಚಾಟ – ವಾಹನ ಸೀಜ್‌

Spread the love

ಚಿಕ್ಕಮಗಳೂರು: ರೀಲ್ಸ್‌ಗಾಗಿ  3000 ಅಡಿ ಎತ್ತರದ ಬೆಟ್ಟದ ತುದಿಗೆ ಥಾರ್‌  ಕೊಂಡೋಯ್ದು ಪ್ರವಾಸಿಗರು ಹುಚ್ಚಾಟ ಮೆರೆದ ಘಟನೆ ಮೂಡಿಗೆರೆ  ತಾಲೂಕಿನ ರಾಣಿಝರಿಯಲ್ಲಿ ನಡೆದಿದೆ. ಅಪಾಯಕಾರಿ ಸ್ಥಳಕ್ಕೆ ಕೊಂಡೊಯ್ದ ಥಾರ್‌ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೀಜ್‌ ಮಾಡಿದ್ದಾರೆ.

ಬೆಂಗಳೂರು ಮೂಲದ ಪ್ರವಾಸಿಗರು ಥಾರ್‌ ಜೀಪ್‌ನಲ್ಲಿ ರಾಣಿಝರಿಗೆ ಭೇಟಿ ನೀಡಿದ್ದರು. ಈ ವೇಳೆ ರೀಲ್ಸ್‌ಗಾಗಿ ಅಪಾಯಕಾರಿ ಬೆಟ್ಟದ ತುದಿಗೆ ಥಾರ್‌ನ್ನು ಕೊಂಡೊಯ್ದಿದ್ದರು. ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಅಧಿಕಾರಿಗಳು ಥಾರ್‌ನ್ನು ಸೀಜ್‌ ಮಾಡಿದ್ದಾರೆ.

ರೀಲ್ಸ್ ಗಾಗಿ ರಿಸ್ಕ್ ತೆಗೆದುಕೊಂಡ ಬೆಂಗಳೂರು ಪ್ರವಾಸಿಗರು ಈಗ ಅರಣ್ಯ ಇಲಾಖೆ ಅತಿಥಿಗಳಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ