Breaking News

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ: 49 ಲೀಟರ್ ಕಳ್ಳಭಟ್ಟಿ ಸರಾಯಿ ವಶ, ಆರೋಪಿ ಬಂಧನ

Spread the love

ಬೆಳಗಾವಿ: ಅಬಕಾರಿ ಇಲಾಖೆಯ ಉನ್ನತಾಧಿಕಾರಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಭಾರಿ ಪ್ರಮಾಣದ ಕಳ್ಳಭಟ್ಟಿ ಸರಾಯಿಯನ್ನು ವಶಪಡಿಸಿಕೊಂಡು ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆಗಸ್ಟ್ 18, 2026 ರಂದು ಡಾ. ವೈ. ಮಂಜುನಾಥ (ಅಬಕಾರಿ ಅಪರ ಆಯುಕ್ತರು, ಅಪರಾಧ, ಬೆಳಗಾವಿ), ಎಫ್. ಎಚ್. ಚಲವಾದಿ (ಅಬಕಾರಿ ಜಂಟಿ ಆಯುಕ್ತರು, ಜಾರಿ ಮತ್ತು ತನಿಖೆ) ಅವರ ಮಾರ್ಗದರ್ಶನದಲ್ಲಿ ಹಾಗೂ ಸ್ವಪ್ನ ಆರ್. ಎಸ್. (ಅಬಕಾರಿ ಉಪ ಆಯುಕ್ತರು, ಬೆಳಗಾವಿ ಉತ್ತರ ಜಿಲ್ಲೆ) ಅವರ ನೇತೃತ್ವದಲ್ಲಿ ಸಾಮೂಹಿಕ ದಾಳಿ ನಡೆಸಲಾಯಿತು. ಮೊರಬ ಗ್ರಾಮದ ಇಂದಿರಾ ನಗರದಲ್ಲಿರುವ ಶಂಭು ಭರಮಾ ಗಸ್ತಿ ಎಂಬಾತನ ಮನೆಯಲ್ಲಿ ಮಾರಾಟಕ್ಕಾಗಿ ಸಂಗ್ರಹಿಸಲಾಗಿದ್ದ ಸುಮಾರು 24,000 ಮೌಲ್ಯದ 49 ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ಸ್ಥಳದಲ್ಲೇ ಜಪ್ತಿ ಮಾಡಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ರಾಯಬಾಗ ವಲಯದ ಅಬಕಾರಿ ಅಧಿಕಾರಿಗಳು ‘ಕರ್ನಾಟಕ ಅಬಕಾರಿ ಕಾಯ್ದೆ 1965’ ರ ಕಲಂ 32(1) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ ಎಂದು ಅಥಣಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ಯಾಕ್‌ ಮಾಡದ ಖಾದ್ಯ ತೈಲ ಮಾರಾಟಕ್ಕೆ ನಿಷೇಧ – ನಿಯಮ ಉಲ್ಲಂಘಿಸಿದ್ರೆ 7 ವರ್ಷ ಜೈಲು

Spread the loveಮುಂಬೈ: ಮಹಾರಾಷ್ಟ್ರದಲ್ಲಿ ಸಡಿಲ (ಪ್ಯಾಕ್ ಮಾಡದ) ಖಾದ್ಯ ತೈಲ ಮಾರಾಟ ಮಾಡುವುದನ್ನು ರಾಜ್ಯ ಆಹಾರ ಮತ್ತು ಔಷಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ