Breaking News

ಅಪಾಯಕಾರಿ ಆಯುಧ ಹೊಂದಿದ್ದ ಆರೋಪಿಯನ್ನು ಬಂಧಿಸಿದ ಬೆಳಗಾವಿ ಪೊಲೀಸರು

Spread the love

ಬೆಳಗಾವಿ: ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸರ “ಆ್ಯಂಟಿ ಸ್ಟಾಬಿಂಗ್ ಸ್ಟ್ಯಾಡ್” ತಂಡ ಕಾರ್ಯಾಚರಣೆ ನಡೆಸುವ ಮೂಲಕ ಆಯುಧ ಹೊಂದಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಆ್ಯಂಟಿ ಸ್ಟಾಬಿಂಗ್ ಸ್ವಾಡ್” ತಂಡದಿಂದ ಪರಿಶೀಲನೆ ಕೈಗೊಳ್ಳುವ ವೇಳೆ ಗಾಂಧಿ ನಗರದ ಅಮಿನಗಲ್ಲಿಯಲ್ಲಿ  ರಹಾನ ಇಸ್ಮಾಯಿಲ್ ನದಾಫ (20) ಎಂಬಾತನ ಬಳಿ ಕಾನೂನು ಬಾಹಿರವಾಗಿ ಕಬ್ಬಿಣದ ಕೊಡಲಿ, ಚಾಕು, ಕೊಯ್ತಾ ಆಯುಧಗಳನ್ನು ಇಟ್ಟುಕೊಂಡಿದ್ದ.

ಮಾಳಮಾರುತಿ ಠಾಣೆಯ ಪಿಎಸ್‌ಐ  ಆನಂದ ಆದಗೊಂಡ ಹಾಗೂ ಸಿಬ್ಬಂದಿಯವರು ಪರಿಶೀಲನೆ ಮಾಡುವಾಗ ಆರೋಪಿಯ ಬೈಕ್ ಮತ್ತು ಆಯುಧಗಳ ಸಮೇತ ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ವಿರುದ್ಧ ಮಾಳಮಾರುತಿ ಠಾಣೆ ಪ್ರ ಸಂ. 177/2026 ಕಲಂ.27(1) ARMS ACT, 1959 & U/s-97 KARNATAKA POLICE ACT 1963 , ಅಡಿಯಲ್ಲಿ ತನಿಖೆ ನಡೆಸಲಾಗಿದೆ.

ದಾಳಿ ಮಾಡಿದ ಪಿಎಸ್‌ಐ, ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ‌.


Spread the love

About Laxminews 24x7

Check Also

ಅಧಿಕಾರ ಸ್ವೀಕರಿಸಿದ ದಿನವೇ ಅಧಿಕಾರಿಗಳಿಗೆ ಸಚಿವ ರಘುಮೂರ್ತಿ ಸೂಚನೆ – ಯೋಜನೆಗಳ ಅನುಷ್ಠಾನಕ್ಕೆ ಸಮಯ ನಿಗದಿ

Spread the loveಬೆಂಗಳೂರು: ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಟಿ.ರಘುಮೂರ್ತಿ  ಇಲಾಖೆಯ ಯೋಜನೆಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ