Breaking News

ಭಾರತ, ಪಾಕ್‌ ಸೇನೆ ಮೇಲೆ ದಾಳಿಗೆ ಅಸಾಫುಲ್‌ ಪ್ಲ್ಯಾನ್‌ – ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

Spread the love

ಬೆಂಗಳೂರು: ನಗರದಲ್ಲಿ  ಪಶ್ಚಿಮ ಬಂಗಾಳ ಮೂಲದ ಅಸಾಫುಲ್‌ ಮಲ್ಲಿಕ್‌ (25) ಎಂಬ ಶಂಕಿತ ಉಗ್ರನನ್ನು ಹೆಬ್ಬಗೋಡಿ  ಪೊಲೀಸರು ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾದ್ದು, ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ.

ಶಂಕಿತ ಉಗ್ರ ಟಿಟಿಪಿ (TTP) ಸಂಘಟನೆ ಸದಸ್ಯ ಇಮ್ರಾನ್ ಸೈದರ್ ಜೊತೆಗೆ ನಿರಂತರ ಸಂಪರ್ಕದಲ್ಲಿರುವುದು ತನಿಖೆ ವೇಳೆ ಗೊತ್ತಾಗಿದೆ. ಈತ ಅಫ್ಘಾನಿಸ್ತಾನಕ್ಕೆ ಹೋಗಲು ವೀಸಾ ಕೂಡ ಅಪ್ಲೈ ಮಾಡಿದ್ದ. ಕಾರಾಣಾಂತರದಿಂದ ಅಫ್ಘಾನಿಸ್ತಾನಕ್ಕೆ ಹೋಗಲು ಆಗಿರಲಿಲ್ಲ. ಅಪಘಾನಿಸ್ತಾನಕ್ಕೆ ಹೋಗಿ ತರಬೇತಿ ಪಡೆದು ಬಂದಿದ್ದರೆ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇತ್ತು.

ಮಲ್ಲಿಕ್‌ ಪಾಕಿಸ್ತಾನ ಸೇನೆ ವಿರುದ್ಧ ಮತ್ತು ಇಂಡಿಯಾದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪ್ಲ್ಯಾನ್‌ ಸಹ ಮಾಡಿದ್ದ. ಅದಕ್ಕೆ ಸೂಕ್ತ ತರಬೇತಿ, ಹಣಕಾಸಿನ ನೆರವಿಗಾಗಿ ಕಾದಿದ್ದ ಎಂದು ತಿಳಿದುಬಂದಿದೆ. ಅಸಾಪುಲ್ ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಬಂದಿದ್ದ (ಎರಡನೇ ಬಾರಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದ). ಇಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡು, ಇಮ್ರಾನ್ ಸೈದರ್/ ಇಮ್ರಾನ್‌ ಅಹಿಂದರ್ ನೆರವಿನಿಂದ ಅಫ್ಘಾನಿಸ್ತಾನಕ್ಕೆ ತೆರಳಲು ನಿರಂತರ ಪ್ರಯತ್ನ ಮಾಡುತ್ತಿದ್ದ. ಅಲ್ಲದೇ ಉಗ್ರ ಸಂಘಟನೆಗಳಿಗೆ ಹಣ ಸಹ ಕಳುಹಿಸಿದ್ದ.

ಮುಸ್ಲಿಂರ ಮೇಲೆ ದೌರ್ಜನ್ಯ ಎಸಗುವ ಕಡೆಗಳಲ್ಲಿ ಅಸಾಫುಲ್‌ ಮಲ್ಲಿಕ್‌ ದಾಳಿ ಮಾಡಲು ಪ್ಲ್ಯಾನ್‌ ಮಾಡಿದ್ದ. ಪಾಕಿಸ್ತಾನ, ಭಾರತ ಸೇರಿದಂತೆ ಕೆಲ ದೇಶಗಳನ್ನು ಟಾರ್ಗೆಟ್ ಮಾಡಿದ್ದ. ಪಾಕಿಸ್ತಾನಿ ಸೇನೆ ಮೇಲೂ ಕೂಡ ದಾಳಿಗೆ ಸಂಚು ರೂಪಿಸಿದ್ದ.

ಪಾಕಿಸ್ತಾನದಲ್ಲಿ ಮಸೀದಿಗಳ ಮೇಲೆ ಮತ್ತು ಅಲ್ಲಿನ ಜನರ ಮೇಲೆ ಪಾಕಿಸ್ತಾನ ಸೇನೆ ದೌರ್ಜನ್ಯ ಎಸಗಿದೆ. ಇಸ್ರೇಲ್ ಸೇನೆ ಪ್ಯಾಲೆಸ್ಟೈನ್ ಮೇಲೆ ದಾಳಿ ಮಾಡಿದೆ. ಇಸ್ರೇಲ್ ಪರವಾಗಿ ಪಾಕಿಸ್ತಾನ ಸೇನೆ ಸಹಾಯ ಮಾಡಿದೆ. ಪ್ಯಾಲೆಸ್ಟೈನ್ ಮುಸ್ಲಿಮರಿಗೆ ಸಹಾಯ ಮಾಡುತ್ತಿಲ್ಲವೆಂಬ ವಿಚಾರವಾಗಿ ಪೋಸ್ಟ್ ಸಹ ಮಾಡಿದ್ದ. ಈ ಬಗ್ಗ ಆತನ ಮೊಬೈಲ್‌ನಲ್ಲಿ ಆಡಿಯೋ ಮೆಸೇಜ್‌ಗಳು ಸಹ ಲಭ್ಯವಾಗಿವೆ. ಆತನ ಬಳಿಯಿದ್ದ ಆಡಿಯೋ, ವಿಡಿಯೋಗಳ ಪರಿಶೀಲನೆಗೆ ಮೊಬೈಲ್‌ನ್ನು ಪೊಲೀಸರು ಎಫ್ಎಸ್ಎಲ್‌ಗೆ ರವಾನಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಮಾಡುವಾಗ ಈತನ ಬಗ್ಗೆ ಪೊಳಿಸರಿಗೆ ಮಾಹಿತಿ ಗೊತ್ತಾಗಿತ್ತು. ಒಂದು ತಿಂಗಳಿನಿಂದ ನಿಗಾವಹಿಸಿ ಮಾಡಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ