ಬೆಂಗಳೂರು: ವಾಲ್ಮೀಕಿ ನಿಗಮ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಸಂಪುಟದಲ್ಲಿ ಮಹಿಳಾ ಸಚಿವರು ಇಲ್ಲದಿರುವ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಇದೇ ವಿಚಾರವಾಗಿ ಆ.14 ರಂದು ಬೆ.9 ಗಂಟೆಗೆ ವಿಧಾನಸೌಧದ ಎದುರಿನ ಭುವನೇಶ್ವರಿ ಪ್ರತಿಮೆ ಮುಂಭಾಗದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಭಟನೆಯ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಬಗ್ಗೆ ಇಂದು (ಆ.13) ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಅಜೆಂಡಾ ನಾಗೇಂದ್ರ ರಾಜೀನಾಮೆ ಆಗಬೇಕು. ಉಳಿದ ವಿಚಾರ ನಂತರದಲ್ಲಿ ಚರ್ಚೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್.ಅಶೋಕ್, ಮೊದಲನೇ ದಿನದಿಂದಲೇ ತಾರ್ಕಿಕ ಅಂತ್ಯ ಕಾಣಿಸುವ ಕೆಲಸ ಮಾಡುತ್ತೆವೆ. ನೂರಾರು ಕೋಟಿ ರೂ. ಸರ್ಕಾರದ ಹಣ ನುಂಗಿದ ವ್ಯಕ್ತಿ ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ನಮ್ಮ ಅಜೆಂಡಾ ನಾಗೇಂದ್ರ ರಾಜೀನಾಮೆ ಪಡೆಯೋದಾಗಿದೆ.
ಆರ್ಎಸ್ಎಸ್ ಗಮನದಲ್ಲಿಟ್ಟುಕೊಂಡು ಒಂದು ಬಿಲ್ ಪಾಸ್ ಮಾಡಿದ್ದಾರೆ. ನೆಹರು, ಇಂದಿರಾಗಾಂಧಿ ಕೈಯಲ್ಲಿ ಆರ್ಎಸ್ಎಸ್ಗೆ ಏನು ಮಾಡುವುದಕ್ಕೆ ಆಗಿಲ್ಲ. ಇವರು ಏನು ಮಾಡ್ಯಾರು? ದೇಶದ ಪ್ರಧಾನಿ ಆರ್ಎಸ್ಎಸ್ ನಾವು ಆರ್ಎಸ್ಎಸ್, ಇಂತಹ ಚಿಲ್ಲರೆ ಬುದ್ದಿ ದ್ವೇಷದ ರಾಜಕಾರಣ ಮಾಡಿದರೆ ಮುಂದೆ ನೀವು ಯಾರು ಹೊರಗಡೆ ಬರೋದಕ್ಕೆ ಆಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
Laxmi News 24×7