Breaking News

ಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ನೇಣಿಗೆ ಕೊರಳೊಡ್ಡಿದ ಪ್ರಿಯಕರ

Spread the love

ಧಾರವಾಡ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರ ಸಹ ನೇಣಿಗೆ ಶರಣಾದ ಘಟನೆ ದಾನೇಶ್ವರಿ ನಗರದ ಪಿಜಿ ಯೊಂದರಲ್ಲಿ ನಡೆದಿದೆ.

ಧಾರವಾಡ  ತಾಲೂಕಿನ ಕೋಟಬಾಗಿ ಗ್ರಾಮದ ತರುಣ್ ಸಾಗರ್ ಕುರಕುರಿ (21) ಆತ್ಮಹತ್ಯೆಗೆ ಶರಣಾದ ಯುವಕ. ಈತ ನಗರದ ವಾಚ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಆ.12 ರಂದು ಈತನ ಪ್ರೇಯಸಿ ಮೇಘಾ ಗುಬ್ಬನ್ನವರ್ (20) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.

ಮನೆಯಲ್ಲಿ ಹೆಚ್ಚು ಮೊಬೈಲ್ ಬಳಸುತ್ತಿದ್ದೀಯ ಎಂದು ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ಈಕೆಯ ಆತ್ಮಹತ್ಯೆ ಸುದ್ದಿ ಕೇಳಿ ಸ್ನೇಹಿತನ ರೂಮ್‌ನಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತರುಣ್, ಗೆಳೆಯನ ರೂಮ್‌ನಲ್ಲಿ ಬಂದು ತಂಗಿದ್ದ‌. ಕಳೆದ ರಾತ್ರಿ ಗೆಳೆಯನ ಮುಂದೆ ಹುಡುಗಿ ಜೊತೆ ಜಗಳವಾಗಿದೆ, ಆಕೆಯ ಸಹೋದರನಿಗೆ ಈ ವಿಷಯ ಗೊತ್ತಾಗಿದೆ ಎಂದು ಹೇಳಿದ್ದ ಎನ್ನಲಾಗಿದೆ.

ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೇಘಾ ಹಾಗೂ ತರುಣ್ ಮಧ್ಯೆ ಪ್ರೇಮ ಕಹಾನಿ ಇತ್ತು ಎಂಬುದು ಇದೀಗ ಗೊತ್ತಾಗಿದೆ. ಈ‌ ಬಗ್ಗೆ ತರಣ್ ಸಾಗರ್ ಪೋಷಕರಿಗೆ ಕೇಳಿದರೆ ಪ್ರೇಮದ‌ ಬಗ್ಗೆ ಗೊತ್ತಿರಲಿಲ್ಲ. ಬೆಳಗ್ಗೆ ಫೋನ್‌ ಎತ್ತದೇ ಇದ್ದಾಗ ಹುಡುಕಾಟ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಯಂತ್ರಕ್ಕೆ ಸಿಲುಕಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಬಾಲಕ – ಪುಟಾಣಿಯ ಸಾಹಸಕ್ಕೆ ಡಿಕೆಶಿ ಮೆಚ್ಚುಗೆ

Spread the loveಮಂಗಳೂರು: ಬಂಟ್ವಾಳದ  ನರಿಕೊಂಬು  ಗ್ರಾಮದ ಶಾಲೆಯಲ್ಲಿ ಅಡುಗೆ ಮಾಡುವಾಗ ತೆಂಗಿನ ಕಾಯಿ ತುರಿಯುವ ವಿದ್ಯುತ್ ಯಂತ್ರಕ್ಕೆ ಸಿಲುಕಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ