Breaking News

ಪೊಲೀಸ್‌ ಜೀಪ್‌ ಬೆನ್ನಟ್ಟಿದ ಪುಂಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳಾ ಪಿಎಸ್‌ಐ

Spread the love

ಹಾಸನ: ಕಾಡಾನೆ  ಸೆರೆ ಕಾರ್ಯಾಚರಣೆ ವೇಳೆ ಪೊಲೀಸ್  ಜೀಪನ್ನು ಒಂಟಿ ಸಲಗ ಅಟ್ಟಾಡಿಸಿದ ಘಟನೆ ಬೇಲೂರು ತಾಲೂಕಿನ ಕೋಗೋಡು ಗ್ರಾಮದ ಬೇಡಿ ಎಸ್ಟೇಟ್‌ ಬಳಿ ನಡೆದಿದೆ. ಜೀಪಿನಲ್ಲಿದ್ದ ಪಿಎಸ್‌ಐ ಶೋಭಾ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕಾರ್ಯಾಚರಣೆಯ ಭದ್ರತೆಗಾಗಿ ಅರೆಹಳ್ಳಿ ಪಿಎಸ್‌ಐ ಶೋಭಾ ಅವರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ, ಕಾಡಾನೆ ರಸ್ತೆ ದಾಟುವಾಗ ಅಲ್ಲಿದ್ದ ಪಿಎಸ್‌ಐ ಜೀಪ್‌ನ್ನು ಅಟ್ಟಾಡಿಸಿದೆ. ಬಳಿಕ ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಆನೆ ಓಡಿಹೋಗಿದೆ

ಏಳು ಸಾಕಾನೆಗಳ ನೇತೃತ್ವದಲ್ಲಿ ಕೆ.ಪಿ ಕಾಲರ್‌ 2 ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ. ಮಹೇಂದ್ರ, ಅಜ್ಜಯ್ಯ, ಪ್ರಶಾಂತ್, ಧನಂಜಯ, ಏಕಲವ್ಯ, ಈಶ್ವರ, ಲಕ್ಷ್ಮಣ ಸೇರಿ ಏಳು ಆನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಅಲ್ಲದೇ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಕಾರ್ಯಾಚರಣೆ ತಂಡದ ಕಣ್ತಪ್ಪಿಸಿ ಕೆ.ಪಿ ಕಾಲರ್ ಓಡಾಡುತ್ತಿ‌ದೆ.

ಒಂಟಿಸಲಗ ಇರುವ ಸ್ಥಳ ಪತ್ತೆ ಹಚ್ಚಲು ಇಟಿಎಫ್ ಸಿಬ್ಬಂದಿ ತೆರಳಿದ್ದಾರೆ. ಡ್ರೋನ್ ಮೂಲಕ ಆನೆಯ ಚಲನವಲನ ವೀಕ್ಷಣೆ ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆನೆಗೆ ಅರವಳಿಕೆ ನೀಡಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಕಾರ್ಯಾಚರಣೆ ಗಮನಿಸಲು ಸ್ಥಳಕ್ಕೆ ಡಿಸಿ ಲತಾಕುಮಾರಿ ಆಗಮಿಸಿದ್ದಾರೆ.


Spread the love

About Laxminews 24x7

Check Also

ಯಂತ್ರಕ್ಕೆ ಸಿಲುಕಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಬಾಲಕ – ಪುಟಾಣಿಯ ಸಾಹಸಕ್ಕೆ ಡಿಕೆಶಿ ಮೆಚ್ಚುಗೆ

Spread the loveಮಂಗಳೂರು: ಬಂಟ್ವಾಳದ  ನರಿಕೊಂಬು  ಗ್ರಾಮದ ಶಾಲೆಯಲ್ಲಿ ಅಡುಗೆ ಮಾಡುವಾಗ ತೆಂಗಿನ ಕಾಯಿ ತುರಿಯುವ ವಿದ್ಯುತ್ ಯಂತ್ರಕ್ಕೆ ಸಿಲುಕಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ