ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆ ತಮಿಳುನಾಡಿನಿಂದ ಬೆಂಗಳೂರಿಗೆ ಬರುವ ಹಾಗೂ ಇಲ್ಲಿಂದ ತಮಿಳುನಾಡಿಗೆ ತೆರಳುವ ಬಸ್ಗಳ ಸಂಚಾರಕ್ಕೆ ಪೊಲೀಸರು ನೀಡಿದ್ದ ತಾತ್ಕಾಲಿಕ ತಡೆಯನ್ನು ತೆರವುಗೊಳಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಯಾವುದೇ ಬಂದ್ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ ತಮಿಳುನಾಡು ಬಸ್ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಬಂದ್ನ ಸ್ವರೂಪ ನೋಡಿಕೊಂಡು ಬಸ್ಗಳ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಪೊಲೀಸರು ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಸದ್ಯ ಪರಿಸ್ಥಿತಿ ಸಹಜವಾಗಿರುವುದರಿಂದ ಎಂದಿನಂತೆ ಬಸ್ಗಳನ್ನು ಓಡಿಸಲು ಸೂಚಿಸಲಾಗಿದೆ.
ತಮಿಳುನಾಡು ಸಾರಿಗೆ ವ್ಯವಸ್ಥೆಯ ಇಲ್ಲಿನ ವ್ಯವಸ್ಥಾಪಕರಿಗೂ ಬಸ್ಗಳ ಸಂಚಾರ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಸದ್ಯ ತಮಿಳುನಾಡಿನ ಬಸ್ಗಳು ಯಾವುದೇ ಅಡಚಣೆ ಇಲ್ಲದೆ ಸಂಚಾರ ಮಾಡುತ್ತಿವೆ. ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ತಮಿಳುನಾಡಿನ ವಿವಿಧ ಭಾಗಗಳತ್ತ ಬಸ್ಗಳು ಎಂದಿನಂತೆ ಹೊರಡುತ್ತಿವೆ.
Laxmi News 24×7