Breaking News

ಮಲೇರಿಯಾ ಆತಂಕ; 30ಕ್ಕೂ ಅಧಿಕ ಪ್ರಕರಣಗಳು ಧೃಡ

Spread the love

ಮಂಗಳೂರು: ಮಳೆಯ ಕಣ್ಣಾಮುಚ್ಚಾಲೆ ಆಟ ಜನರಿಗೆ ಪ್ರಾಣ ಸಂಕಟ ತಂದಿದೆ. ಮಂಗಳೂರು ನಗರದಲ್ಲಿ ಮಲೇರಿಯಾದಂತಹ ಮಾರಕ ರೋಗ ಹಬ್ಬುತ್ತಿದ್ದು, ಮೂವತ್ತಕ್ಕೂ ಅಧಿಕ ಪ್ರಕರಣಗಳು ಕಾಣಿಸಿಕೊಂಡಿದೆ. ಮಲೇರಿಯಾ ಹರಡುವಿಕೆ ಆರೋಗ್ಯ ಇಲಾಖೆಗೆ ತಲೆನೋವಾಗಿದ್ದು, ಮಲೇರಿಯಾ ತಡೆಗಟ್ಟಲು ಜಿಲ್ಲಾ ಆರೋಗ್ಯ ಇಲಾಖೆ ಈಗ ಜನಜಾಗೃತಿಗೆ ಮುಂದಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದ್ದಂತೆ ಮಲೇರಿಯಾ ಪ್ರಕರಣವೂ ಹೆಚ್ಚುತ್ತಿದೆ. ಹೊರ ರಾಜ್ಯಗಳಿಂದ ಕಟ್ಟಡ ಹಾಗೂ ಇತರ ಕಾಮಗಾರಿಗಳಿಗೆ ಆಗಮಿಸುವ ಕಾರ್ಮಿಕರಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಳವಾಗಿದೆ. ಅತೀ ಹೆಚ್ಚಾಗಿ ಕಾರ್ಮಿಕರು ದ.ಕ. ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಲೇರಿಯಾ ನಿಯಂತ್ರಣ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಬಿಹಾರ, ಒಡಿಶಾ, ಛತ್ತೀಸ್‌ಗಢ ಸೇರಿದಂತೆ ಹೊರ ರಾಜ್ಯಗಳಲ್ಲಿ ಮಲೇರಿಯಾ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ, ಅಲ್ಲಿಂದ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಬರುವ ಕಾರ್ಮಿಕರಲ್ಲಿಯೂ ರೋಗ ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಹೊರ ರಾಜ್ಯದ ಕಾರ್ಮಿಕರ ಮೇಲೆ ವಿಶೇಷ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಜಿಲ್ಲೆಯಲ್ಲಿ ಎರಡು ತಿಂಗಳಿಂದ ಮಲೇರಿಯಾ ಪ್ರಕರಣದಲ್ಲಿ ಏರಿಕೆ ಕಂಡಿದೆ. ಈವರೆಗೆ 30 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 23 ಪ್ರಕರಣಗಳು ಹೊರ ಜಿಲ್ಲೆ, ರಾಜ್ಯದವರದ್ದು. ಒಟ್ಟು ಪ್ರಕರಣದಲ್ಲಿ ಮಂಗಳೂರಿನ ನಗರ ವ್ಯಾಪ್ತಿಯಲ್ಲೇ ಹೆಚ್ಚು ಕಾಣಿಸಿಕೊಂಡಿದೆ. ನಗರಕ್ಕೆ ಉದ್ಯೋಗ, ವಿದ್ಯಾಭ್ಯಾಸ ಸಹಿತ ವಿವಿಧ ಕೆಲಸಕ್ಕಾಗಿ ಜನರು ಆಗಮಿಸುತ್ತಾರೆ. ಈ ವೇಳೆಗಾಗಲೇ ಜ್ವರದ ಲಕ್ಷಣ ಇರುತ್ತದೆ. ಅದು ಹರಡಿ ಸಮಸ್ಯೆ ತಂದುಕೊಡುತ್ತದೆ. ಹೊರ ರಾಜ್ಯ ಕಾರ್ಮಿಕರು ಕರಾವಳಿ ಪ್ರದೇಶದ ಮಲೇರಿಯಾ ಪರೀಕ್ಷೆ ನಡೆಸಿಯೇ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸಂಬಂಧಪಟ್ಟ ನಿರ್ಮಾಣ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಮಲೇರಿಯಾ ತಡೆ ನಿಟ್ಟಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕೆಲಸದಲ್ಲಿ ನಿರತ ಕಾರ್ಮಿಕರ ಬಗ್ಗೆ ನಿಗಾ ಇಡಲು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ವಿಶೇಷ ತಂಡ ರಚನೆ ಮಾಡಲಾಗಿದೆ. ಕಟ್ಟಡ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿ, ಕಾರ್ಮಿಕರ ರಕ್ತದ ಮಾದರಿ ಪರೀಕ್ಷೆ ಮಾಡಲಾಗುತ್ತದೆ. ಅಲ್ಲಲ್ಲಿ ಇರುವ ನೀರಿನ ತೊಟ್ಟಿಗಳಲ್ಲಿಯೂ ಅರಿವು ಮೂಡಿಸಲಾಗುತ್ತದೆ. ಸ್ಯಾಂಪಲ್ ಟೆಸ್ಟ್ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಬಿಸಿಲು-ಮಳೆ ವಾತಾವರಣ ಇದ್ದು, ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ. ಮಲೇರಿಯಾ ತಡೆಗಟ್ಟಲು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆ ಪರದೆಯನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿ, ಬಾಗಿಲು-ಕಿಟಕಿಗಳಿಗೆ ಸೊಳ್ಳೆ ತಡೆಯುವ ಜಾಲರಿ ಅಳವಡಿಸಿ. ಸೊಳ್ಳೆಯಿಂದ ಗರ್ಭಿಣಿಯರು ಹೆಚ್ಚಿನ ಎಚ್ಚರಿಕೆ ವಹಿಸಿ. ಮಂದ ಬಣ್ಣದ ಉಡುಪು ಧರಿಸಿ ಎಂದು ಜನರಿಗೆ ಮನವಿ ಮಾಡಿದೆ.


Spread the love

About Laxminews 24x7

Check Also

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೀದರ್ ATM ದರೋಡೆಕೋರರು ಕೊನೆಗೂ ಅರೆಸ್ಟ್‌

Spread the loveಬಿಹಾರದಲ್ಲಿ  ಆರೋಪಿಗಳ ಕಾರು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಅಮನ್‌ಕುಮಾರ್ ಸಿಂಗ್ & ಅಲೋಕ್‌ಕುಮಾರ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ‌‌‌‌. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ