Breaking News

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಶಾಸಕ ಅಭಯ್ ಪಾಟೀಲ್: ಐಟಿ-ಸೆಮಿಕಂಡಕ್ಟರ್ ಪಾರ್ಕ್‌ಗೆ ಭೂಮಿ ನೀಡಲು ಮನವಿ

Spread the love

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಶಾಸಕ ಅಭಯ್ ಪಾಟೀಲ್: ಐಟಿ-ಸೆಮಿಕಂಡಕ್ಟರ್ ಪಾರ್ಕ್‌ಗೆ ಭೂಮಿ ನೀಡಲು ಮನವಿ
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಬೆಳಗಾವಿಯ ಅಭಿವೃದ್ಧಿ ಹಾಗೂ ಯುವಕರ ಉದ್ಯೋಗ ಸೃಷ್ಟಿ ಕುರಿತು ಪ್ರಮುಖ ಚರ್ಚೆ ನಡೆಸಿದರು. ಬೆಳಗಾವಿಯಲ್ಲಿರುವ ರಕ್ಷಣಾ ಇಲಾಖೆಯ ಭೂಮಿಯನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಅಥವಾ ಅಲ್ಲಿ ಪ್ರಮುಖ ಕೈಗಾರಿಕಾ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮನವಿ ಸಲ್ಲಿಸಿದರು.
ಬೆಳಗಾವಿಯಲ್ಲಿ ಐಟಿ ಮತ್ತು ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸಲು ರಕ್ಷಣಾ ಇಲಾಖೆಯ ವಶದಲ್ಲಿರುವ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಬೇಕೆಂದು ಶಾಸಕ ಅಭಯ್ ಪಾಟೀಲ್ ರಕ್ಷಣಾ ಸಚಿವರಿಗೆ ವಿನಂತಿಸಿದರು.
ಒಂದು ವೇಳೆ ಭೂಮಿ ಹಸ್ತಾಂತರ ಸಾಧ್ಯವಾಗದಿದ್ದರೆ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅದೇ ಭೂಮಿಯಲ್ಲಿ ಕೇಂದ್ರ ಸರ್ಕಾರದಿಂದ ರಕ್ಷಣಾ ಉತ್ಪಾದನಾ ಘಟಕವನ್ನು (Defence Manufacturing Unit) ಸ್ಥಾಪಿಸಬೇಕೆಂದು ಕೋರಿದರು. ಬೆಳಗಾವಿಯ ಸಮಗ್ರ ಬೆಳವಣಿಗೆ ಹಾಗೂ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ತಾವು ಸದಾ ಬದ್ಧರಾಗಿರುವುದಾಗಿ ಅಭಯ್ ಪಾಟೀಲ್ ಈ ಸಂದರ್ಭದಲ್ಲಿ ತಿಳಿಸಿದರು

Spread the love

About Laxminews 24x7

Check Also

ಶಿಕ್ಷಣದ ದೇಗುಲ ಕಳಂಕ: ಕ್ಲಾಸ್‌ರೂಮ್‌ನಲ್ಲೇ ಶಿಕ್ಷಕ-ಶಿಕ್ಷಕಿ ರೊಮ್ಯಾನ್ಸ್, ಹೆಂಡತಿ ಇಟ್ಟಿದ್ದ ಹಿಡನ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಮುಕ!

Spread the love ಶಿಕ್ಷಣದ ದೇಗುಲ ಕಳಂಕ: ಕ್ಲಾಸ್‌ರೂಮ್‌ನಲ್ಲೇ ಶಿಕ್ಷಕ-ಶಿಕ್ಷಕಿ ರೊಮ್ಯಾನ್ಸ್, ಹೆಂಡತಿ ಇಟ್ಟಿದ್ದ ಹಿಡನ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಮುಕ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ