Breaking News

ರಾಯರ ಹುಂಡಿಯಲ್ಲಿ ವಿಚಿತ್ರ ಪತ್ರ: “ಸ್ವಾಮಿ, ನನ್ನನ್ನ ಆ ಹುಡುಗಿಯಿಂದ ಕಾಪಾಡು!”

Spread the love

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ಪತ್ರ!
• ರಾಮದುರ್ಗದ ರಾಯರ ಮಠದಲ್ಲಿ ವಿಚಿತ್ರ ಪ್ರಸಂಗ
• ಹುಂಡಿಯಲ್ಲಿ ಪತ್ತೆಯಾಯಿತು ಭಕ್ತನ ಅಪರೂಪದ ಪತ್ರ
• “ಒಬ್ಬ ಹುಡುಗಿಯಿಂದ ಕಾಪಾಡಿ ಸ್ವಾಮಿ” ಎಂದು ಪ್ರಾರ್ಥನೆ
• ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ಪತ್ರ!
ರಾಮದುರ್ಗ ತಾಲೂಕಿನ ಪಡಕೋಟಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ಎಣಿಕೆ ವೇಳೆ ವಿಚಿತ್ರ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಭಕ್ತನೊಬ್ಬ “ಸ್ವಾಮಿ, ನನ್ನನ್ನು ಒಬ್ಬ ಹುಡುಗಿಯಿಂದ ಕಾಪಾಡಿ” ಎಂದು ರಾಯರಿಗೆ ಬರೆದಿರುವ ಭಾವನಾತ್ಮಕ ಮನವಿ ಪತ್ರವೊಂದು ಹುಂಡಿಯಲ್ಲಿ ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಸಾಮಾನ್ಯವಾಗಿ ದೇವಸ್ಥಾನದ ಹುಂಡಿಗಳಲ್ಲಿ ಭಕ್ತರು ಉದ್ಯೋಗ, ಮದುವೆ, ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ದೇವರಿಗೆ ಪತ್ರ ಬರೆದು ಹಾಕುವುದು ಸಹಜ. ಆದರೆ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪಡಕೋಟಗಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದ ವೇಳೆ ಅಪರಿಚಿತ ಭಕ್ತನೊಬ್ಬ ಬರೆದ ವಿಚಿತ್ರ ಪತ್ರ ಸಿಬ್ಬಂದಿಗೆ ಸಿಕ್ಕಿದೆ. ಪತ್ರದಲ್ಲಿ ತನ್ನ ಹೆಸರು ಹಾಗೂ ವಿಳಾಸವನ್ನು ಗೌಪ್ಯವಾಗಿಟ್ಟಿರುವ ಆ ವ್ಯಕ್ತಿ, “ಸ್ವಾಮೀ, ನನ್ನನ್ನು ಒಬ್ಬ ಹುಡುಗಿಯಿಂದ ಕಾಪಾಡಿ” ಎಂದು ಭಾವನಾತ್ಮಕವಾಗಿ ರಾಯರಲ್ಲಿ ಪ್ರಾರ್ಥಿಸಿಕೊಂಡಿದ್ದಾನೆ. ಈ ಅಪರೂಪದ ಹಾಗೂ ತಮಾಷೆಯ ಪತ್ರವನ್ನು ಕಂಡು ಮಠದ ಸಿಬ್ಬಂದಿ ಹಾಗೂ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಈ ಪತ್ರದ ಸುದ್ದಿ ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Spread the love

About Laxminews 24x7

Check Also

ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ – ಕ್ಷಮೆಯಾಚಿಸಿದ ಶಾಸಕ ಸುರೇಶ್‌ಗೌಡ ಪುತ್ರಿ

Spread the loveಮಂಡ್ಯ: ಲೇಡಿ ಪಿಎಸ್‌ಐಗೆ  ಕಪಾಳಮೋಕ್ಷ ಪ್ರಕರಣ ಸಂಬಂಧ ಶಾಸಕ ಸುರೇಶ್‌ಗೌಡ  ಪುತ್ರಿ ಐಶ್ವರ್ಯ ಪಿಎಸ್‌ಐ ಸವಿತಾ ಪಾಟೀಲ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ