Breaking News

ಲಾಕ್‍ಡೌನ್ ಮುಗಿದಿದ್ದೆ ತಡ ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನ…

Spread the love

ಬೆಂಗಳೂರು: ಒಂದು ವಾರದ ಲಾಕ್‍ಡೌನ್ ಅಂತ್ಯವಾಗಿದ್ದೆ ತಡ ಬೆಂಗಳೂರಿನಲ್ಲಿ ವಾಸವಿದ್ದ ಬೇರೆ ಬೇರೆ ರಾಜ್ಯದವರು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಕಡೆ ಮುಖ ಮಾಡಿದ್ದಾರೆ.

ಒಂದು ವಾರಗಳ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮಾತ್ರ ಲಾಕ್‍ಡೌನ್ ಮಾಡಲಾಗಿತ್ತು. ರೈಲು ಮತ್ತು ವಿಮಾನ ಓಡಾಟವನ್ನು ನಿಲ್ಲಿಸಿರಲಿಲ್ಲ. ಆದರೆ ರೈಲ್ವೆ ನಿಲ್ದಾಣಕ್ಕೆ ಹೋಗಲು ಯಾವುದೇ ಬಸ್, ಆಟೋ, ಕ್ಯಾಬ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬೇರೆ ಬೇರೆ ರಾಜ್ಯದ ಕಾರ್ಮಿಕರು ಒಂದು ವಾರ ಬೆಂಗಳೂರಿನಲ್ಲಿ ಲಾಕ್‍ಡೌನ್ ಆಗಿದ್ದರು. ಇದೀಗ ಲಾಕ್‍ಡೌನ್ ಅಂತ್ಯವಾಗುತ್ತಿದ್ದಂತೆ ಕಾರ್ಮಿಕರು ರೈಲ್ವೆ ನಿಲ್ದಾಣದ ಕಡೆ ಬರುತ್ತಿದ್ದಾರೆ

ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಮುಂದೆ ಜನ ಕ್ಯೂ ನಿಂತಿದ್ದು, ಸಾವಿರಾರು ಜನ ಲಗೇಜ್ ಸಮೇತ ಬೆಂಗಳೂರನ್ನ ತೊರೆಯುತ್ತಿದ್ದಾರೆ. ಬೆಳ್ಳಂಬೆಳ್ಳಗ್ಗೆ ಹೊರ ರಾಜ್ಯದವರು ಬೆಂಗಳೂರನ್ನ ತೊರೆಯಲು ಮುಂದಾಗಿದ್ದು, ಬಿಹಾರ, ಪಾಟ್ನಾ ಮತ್ತು ಅಸ್ಸಾಂ ಕಡೆ ಹೋಗುವುದಕ್ಕೆ ಕಾರ್ಮಿಕರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಹಾಕಿಕೊಳ್ಳದೆ ಜನ ಲಗೇಜ್ ಇಟ್ಟಿಕೊಂಡು ಕಾಯುತ್ತಿದ್ದಾರೆ.


Spread the love

About Laxminews 24x7

Check Also

ಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ

Spread the loveಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌  ಅವರ ಮತವನ್ನು ಅಸಿಂಧುಗೊಳಿಸಬೇಕೆಂಬ ಕಾಂಗ್ರೆಸ್‌ ಆಕ್ಷೇಪವನ್ನ ಚುನಾವಣಾಧಿಕಾರಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ