Breaking News

ಲಾಕ್​​ಡೌನ್ ತೆರವು; ರಾಜಧಾನಿಯತ್ತ ಜನರು ವಾಪಸ್​

Spread the love

ಬೆಂಗಳೂರು: ಇಂದಿನಿಂದ ಲಾಕ್​ಡೌನ್​ ತೆರವಾಗಿರೋ ಹಿನ್ನೆಲೆಯಲ್ಲಿ ಬೆಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ. ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಇಷ್ಟು ದಿನ ಲಾಕ್​​ಡೌನ್ ಇದ್ದ ಕಾರಣ ಹೋಟೆಲ್​ಗಳಲ್ಲಿ ಕೇವಲ ಪಾರ್ಸಲ್​​ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಇಂದಿನಿಂದ ಗ್ರಾಹಕರಿಗೆ ಟೇಬಲ್ ಸರ್ವೀಸ್ ​ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಸಾರ್ವಜಕರಿಗೆ ಸೇವೆ ಒದಗಿಸಲು ಹೋಟೆಲ್​ಗಳು ಸಿದ್ಧವಾಗಿವೆ. ಹೋಟೇಲ್ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದ್ದು, ಕೈಗಳನ್ನು ಸ್ಯಾನಿಟೈಸ್​ ಮಾಡಿ ಗ್ರಾಹಕರು ಒಳಪ್ರವೇಶಿಸಬೇಕು.

ಒಂದು ವಾರದ ಲಾಕ್​​ಡೌನ್ ಇಂದು ಮುಂಜಾನೆ ಐದು ಗಂಟೆಗೆ ಅಂತ್ಯವಾದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನ‌ ಸಂಚಾರ ಹೆಚ್ಚಿದೆ.
ಮಾರುಕಟ್ಟೆಗಳಲ್ಲೂ ವ್ಯಾಪಾರ ಆರಂಭವಾಗಿದೆ. ಮಾಲ್​ಗಳಿಗೆ ಜನರ ಭೇಟಿ ಶುರುವಾಗಿದೆ.

https://youtu.be/I1U-UG-NHuk

ಲಾಕ್​​ಡೌನ್​ನಿಂದ ತಮ್ಮ ಗ್ರಾಮಗಳತ್ತ ತೆರಳಿದ್ದ ಜನರು ಮತ್ತೆ ರಾಜಧಾನಿಯತ್ತ ದೌಡಾಯಿಸುತ್ತಿದ್ದು, ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಒಂದು ವಾರದಿಂದ ಶಾಂತವಾಗಿದ್ದ ರಸ್ತೆಗಳು, ಇಂದು ಮತ್ತೆ ವಾಹನಗಳಿಂದ ತುಂಬಿದೆ. ನಾಯಂಡಹಳ್ಳಿ ಜಂಕ್ಷನ್ ಬಳಿ ವಾಹನ ದಟ್ಟಣೆ ಉಂಟಾಗಿದೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ