Breaking News

ಆಸ್ತಿ ತೆರಿಗೆ ಹೆಚ್ಚಿಸಲ್ಲ: ಕೃಷ್ಣ ಬೈರೇಗೌಡ

Spread the love

ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಬೆಂಗಳೂರು  ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಗುಡ್‌ನ್ಯೂಸ್ ನೀಡಿದ್ದು, ಆಸ್ತಿ ತೆರಿಗೆ ಹೆಚ್ಚಿಸಲ್ಲ ಎಂದಿದ್ದಾರೆ.

ಜಿಬಿಎ ಅಧಿಕಾರಿಗಳೊಂದಿಗೆ ನಡೆದ ಸಭೆ ಬಳಿಕ ಮಾತನಾಡಿದ ಅವರು, ಆಸ್ತಿ ತೆರಿಗೆ ಹೆಚ್ಚಳ ಮಾಡಲ್ಲ. ಬೆಂಗಳೂರಿನಲ್ಲಿ ಒಟ್ಟು 36 ಲಕ್ಷ ಆಸ್ತಿದಾರರು ಇದ್ದು, ಅದರಲ್ಲಿ 16 ಲಕ್ಷ ಆಸ್ತಿದಾರರು ತೆರಿಗೆ ಕಟ್ಟುತ್ತಿದ್ದಾರೆ. ಉಳಿದ ಅರ್ಧದಷ್ಟು ಮಂದಿ ಆಸ್ತಿ ತೆರಿಗೆ ಕಟ್ಟುತ್ತಿಲ್ಲ. ಹೀಗಾಗಿ ತೆರಿಗೆ ಕಟ್ಟದೇ ಸರ್ಕಾರಕ್ಕೆ ವಂಚಿಸುತ್ತಿರುವ 16 ಲಕ್ಷ ತೆರಿಗೆದಾರರನ್ನ ಪತ್ತೆ ಹಚ್ಚುತ್ತೇವೆ. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಡ್ರೋನ್, ಜಿಪಿಎಸ್ ಮೂಲಕ ಸರ್ವೆ ಮಾಡಿ ತೆರಿಗೆ ವಂಚನೆದಾರರ ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನೂ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಆಸೆ ನನಗೂ ಇಲ್ಲ. ನಾನು ಆಸ್ತಿ ತೆರಿಗೆ ಕಡಿಮೆ ಇರಲು ಬಯಸುತ್ತೇನೆ. ಆದ್ರೆ ಮಾಲೀಕರು ಸಂಪೂರ್ಣವಾಗಿ ತೆರಿಗೆ ಕಟ್ಟಿದ್ರೆ ಅದರಲ್ಲೇ ನಗರಪಾಲಿಕೆಗಳಿಗೆ ಬೇಕಾದಷ್ಟು ಆದಾಯ ಬರುತ್ತೆ. ಆಗ ಆಸ್ತಿ ತೆರಿಗೆ ಏರಿಕೆ ಮಾಡುವ ವಿಚಾರವೇ ಬರೋದಿಲ್ಲ. ಪಕ್ಕದ ಮನೆಯವರು ಕಟ್ಟಿದಾಗ ನಾವುಗಳು ತೆರಿಗೆ ಕಟ್ಟುವ ಬಗ್ಗೆ ಆಸಕ್ತಿ ತೋರಬೇಕು. ದೊಡ್ಡ ಮೊತ್ತ ಅಲ್ಲದಿದ್ದರೂ ಸಣ್ಣದಾಗಿ ತೆರಿಗೆ ಕಟ್ಟಿದ್ರೆ ಯಾವುದೇ ಸಮಸ್ಯೆ ಆಗಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಬೆಂಗಳೂರಿನ ಖಾಲಿ ನಿವೇಶನದಾರರಿಗೆ ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ 15ರ ಒಳಗಡೆ ಡೆಡ್, ಖಾಲಿ ಸೈಟ್ ಸ್ವಚ್ಛಗೊಳಿಸಿ. ಇಲ್ಲದಿದ್ದರೆ ದಂಡ ವಿಧಿಸಲಾಗುವುದು. ಇಲ್ಲದಿದ್ದರೆ ಜಿಬಿಎ ಸ್ವಚ್ಛ ಮಾಡುತ್ತೆ ಅದರ ಖರ್ಚು ಖಾಲಿ ಸೈಟ್ ನಿವೇಶನದಾರರು ಭರಿಸಬೇಕು ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಉಗ್ರನಿಗೆ 7 ವರ್ಷ ಜೈಲು ಶಿಕ್ಷೆ

Spread the loveಬೆಂಗಳೂರು: ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಉಗ್ರನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಎನ್‌ಐಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ