Breaking News

ಜಮೀರ್ ಅಹ್ಮದ್ ಆಸ್ತಿ ಪ್ರಕರಣ – ರಾಜ್ಯಪಾಲರ ನಿರ್ಧಾರ ಕಾದು ನೋಡಬೇಕು: ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ

Spread the love

ರಾಯಚೂರು: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಪ್ರಕರಣದ ದೂರು ನಮ್ಮಲ್ಲಿ ದಾಖಲಾಗಿದೆ. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಕೇಳಬೇಕಾಗಿದೆ. ಅನುಮತಿ ಕೇಳಿದ್ದೇವೆ. ರಾಜ್ಯಪಾಲರ ನಿರ್ಧಾರ ಏನು ಎಂದು ಕಾದು ನೋಡೋಣ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ  ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ದೂರು ದಾಖಲಾಗಿದ್ದು, ತನಿಖೆ ಆಗಿದೆ. ಚಾರ್ಜ್ಶೀಟ್ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದೇವೆ. ಆದರೆ ಅದರ ಡೀಟೆಲ್ಸ್, ಒಳಗಿರುವ ವಿಷಯವನ್ನ ಹೇಳೋದಿಲ್ಲ ಎಂದಿದ್ದಾರೆ.

ಲೋಕಾಯುಕ್ತ ಎಸ್‌ಪಿ ವರ್ಗಾವಣೆ ಹಿಂದೆ ಕಾಣದ ಕೈ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೆಲ್ಲ ಸುಳ್ಳು, ಕತೆ ಕಟ್ಟಿಕೊಳ್ಳುವುದಿದ್ದರೇ ಕತೆ ಕಟ್ಟಿಕೊಳ್ಳಬಹುದು. ಪಬ್ಲಿಕ್ ಸರ್ವಿಸ್‌ಗೆ ಬಂದ್ರೆ ವರ್ಗಾವಣೆ ಅದರ ಜೊತೆಯೇ ಇರುತ್ತದೆ. ಟ್ರಾನ್ಸಫರ್ ಅಂದ್ರೆ ಅದಕ್ಕೆ ಇನ್ಸಿಡೆಂಟ್ಸ್ ಆಫ್ ಸರ್ವಿಸ್ ಅಂತಾರೆ. ಆಡಳಿತಾತ್ಮಕ ಕಾರಣಕ್ಕೆ ವರ್ಗಾವಣೆಗಳನ್ನ ಮಾಡುತ್ತೇವೆ. ಈಗ ಅವರು ವರ್ಗಾವಣೆ ಆಗಿದ್ದಾರೆ, ಇನ್ನೂ ವರ್ಗಾವಣೆಗಳನ್ನ ಮಾಡಬೇಕಿದೆ. ಯಾರನ್ನ ಎಲ್ಲಿ? ಯಾವ ಕಡೆ ಹಾಕಬೇಕು? ಅಂತ ಚರ್ಚೆ ಮಾಡ್ತೀವಿ. ಮೂಲ ಇಲಾಖೆಗೆ ಕಳುಹಿಸಬೇಕಾ? ಆಡಳಿತಾತ್ಮಕ ಅನುಕೂಲತೆ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆ ವಿಷಯದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ