Breaking News

ಗೃಹಜ್ಯೋತಿ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್

Spread the love

ಬೆಂಗಳೂರು: ಬಾಡಿಗೆದಾರರಾಗಿರುವ ಗೃಹಜ್ಯೋತಿ ಫಲಾನುಭವಿಗಳಿಗೆ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಅಗ್ರಿಮೆಂಟ್ ಕಾಪಿ ಇಲ್ಲದಿದ್ದರೂ ಬಾಡಿಗೆದಾರರು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಬಹುದು ಅಂತ ಇಂಧನ ಇಲಾಖೆ ಹೇಳಿದೆ.

ಬಾಡಿಗೆ ಅಗ್ರಿಮೆಂಟ್ ಪ್ರತಿ ಇಲ್ಲದಿದ್ದರೆ ಬೆಸ್ಕಾಂ ಅಧಿಕಾರಿಗಳು ಕೊಡುವ ಒಂದು ಫಾರಂಗೆ ಬಾಡಿಗೆದಾರರು ಮತ್ತು ಮಾಲೀಕರು ಸಹಿ ಹಾಕಿ ಕೊಡಬೇಕು. ಇದಕ್ಕಾಗಿ ಇಂಧನ ಇಲಾಖೆ ಹೊಸ ಫಾರಂ ಸಿದ್ಧಪಡಿಸಿದೆ. ಗ್ರಾಮಾಂತರ ಭಾಗಗಳಲ್ಲಿ ಅಗ್ರಿಮೆಂಟ್ ಕಾಪಿ ಇಲ್ಲದೇ ಅರ್ಜಿ ಸಲ್ಲಿಕೆ ಕಷ್ಟ ಆಗಿ ಇದೀಗ ಹೊಸ ಫಾರಂ ಸಿದ್ಧಪಡಿಸಿದ್ದಾರೆ.

ಈ ಮಧ್ಯೆ, ಗೃಹಜ್ಯೋತಿ ಪರಿಷ್ಕರಣೆಗಾಗಿ ಬಿಲ್ ರೀಡರ್‌ಗಳನ್ನು ಬಳಸಿಕೊಳ್ಳುತ್ತಿರುವ ಕಾರಣ ಜುಲೈ ತಿಂಗಳಿನಲ್ಲಿ ಮೀಟರ್ ರೀಡಿಂಗ್ ಇರಲ್ಲ. ಬದಲಿಗೆ ಕಳೆದ 3 ತಿಂಗಳಲ್ಲಿ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ ಜುಲೈ ತಿಂಗಳ ಸರಾಸರಿ ಬಿಲ್ ಬರಲಿದೆ ಅಂತ ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ.


Spread the love

About Laxminews 24x7

Check Also

ವಿಜಯಪುರ | ಭೂತನಾಳ ಕೆರೆಯಲ್ಲಿ 6 ಶವ ಪತ್ತೆ – ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಶಂಕೆ

Spread the loveವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ  6 ಜನರ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಕುಟುಂಬವೇ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ