Breaking News

ಕೊರೊನಾ ತಡೆಗಟ್ಟಲು ಲಾಕ್ ಡೌನ್ ವೊಂದೆ ಮಾರ್ಗವಲ್ಲ:ರಮೇಶ ಜಾರಕಿಹೊಳಿ

Spread the love

ಬೆಳಗಾವಿ:  ಕೊರೊನಾ ತಡೆಗಟ್ಟಲು ಲಾಕ್ ಡೌನ್ ವೊಂದೆ ಮಾರ್ಗವಲ್ಲ.  ಜನರು ಸ್ವ ಪ್ರೇರಣೆಯಿಂದ ಸಹಕರಿಸಿದೆ ಮಾತ್ರ ಸೋಂಕು ತಡೆಗಟ್ಟಬಹುದು.  ಮುಂದಿನ ದಿನ  ಸಾಧಕ, ಬಾಧಕಗಳ ಕುರಿತು  ಚರ್ಚಿಸಿ ಲಾಕ್ ಡೌನ್  ಬಗ್ಗೆ ಮಾಹಿತಿ ನೀಡಲಾಗುವುದು ಎಂದು  ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ಸರ್ಕಾರ ಕೋವಿಡ್ ನಿರ್ವಹಣೆಗೆ ನಿರಂತರ ಶ್ರಮಿಸುತ್ತಿದೆ. ಬಿಮ್ಸ್ ಆಸ್ಪತ್ರೆಯಲ್ಲಿ  ಸಣ್ಣ ಪುಟ್ಟ ಸಮಸ್ಯಗಳಾಗಿವೆ. ಅದರ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ.

ಪ್ರತಿ ಮೂರು ಗಂಟೆಗೆ ಡಿಸಿ, ಜಿಪಂ ಇಸಿಓ, ಹಾಗೂ ಎಸ್ಪಿ ಅವರಿಗೆ ಭೇಟಿ ನೀಡಲು  ಕೋರಲಾಗಿದೆ.   ಗುಣಮಟ್ಟದ ಊಟ ರೋಗಿಗಳ ಬಗ್ಗೆ ಕಾಳಜಿ ವಹಿಸಲು ಸೂಚಿಸಲಾಗಿದೆ. ಅಲ್ಲದೇ   ಆ್ಯಂಬುಲೆನ್ಸ್ ಗಳ ಕೊರೆತೆಯಿದೆ.  ಖಾಸಗಿ ಮಾಕ್ಸಿ ಕ್ಯಾಬ್ ಗಳ ಬಾಡಿಗೆ ಪಡೆಯಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಣ್ಣ ಪುಟ್ಟ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿಲ್ಲ ಎಂಬುವುದು ನಮ್ಮ ಗಮನಕ್ಕೆ ಬಂದಿದೆ. ಖಾಸಗಿ ಆಸ್ಪತ್ರೆಗಳಿಗೆ ಕಿಟ್ ನೀಡಲಾಗುವುದು, ರೋಗಿಗಳ ಚೆಕ್ ಮಾಡಿ   ಸಣ್ಣಪುಟ್ಟ ಕಾಯಿಲೆಗಳಿಗೆ  ಚಿಕಿತ್ಸೆ ನೀಡಲು ಸೂಚನೆ ನೀಡಲಾಗುವುದು ಎಂದು ಹೇಳಿದ್ರು.

ಬಿಮ್ಸ್ ಆಸ್ಪತ್ರೆಯಲ್ಲಿ ಬೆಟ್ ಕೊರತೆ ನೀಗಿಸಲಾಗಿದೆ.  ಜಿಲ್ಲೆಯ 10  ತಾಲೂಕು ಆಸ್ಪತ್ರೆಯಲ್ಲಿಯೂ 100 ರಂತೆ ಸಾವಿರ ಬೆಡ್ ಗಳ ವ್ಯವಸ್ಥೆ ಮಾಡಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ.  ಎ.ಬಿ.ಸಿ ಕೆಟಗೆರಿ ಮಾಡಲಾಗಿದೆ. ಮೆಜರ್  ರೋಗಿಗಳನ್ನು ಮಾತ್ರ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗುವುದು ಉಳಿದಂತೆ ತಾಲೂಕಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದರು .

ಕೊರೊನಾ ಎಂಬುವುದು ದೊಡ್ಡ ರೋಗವಲ್ಲ ಅದರಿಂದ ಗುಣಮುಖರಾಗಬಹುದು. ಮಾಧ್ಯಮದವರು  ಜನರಿಗೆ ಹೆದರಿಸುವ ಬದಲು ಧೈರ್ಯ ಹೇಳುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ