ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರಾಣಿ ಚನ್ನಮ್ಮ ಮ್ಯೂಸಿಯಂ

Spread the love

ಬೆಳಗಾವಿಗೆ ಕಮಲ ಬಸದಿ  ಮಾದರಿಯಲ್ಲೇ ಇಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್-2 ಕಟ್ಟಡ ತಲೆಎತ್ತಲಿದೆ. ಐತಿಹಾಸಿಕ ಬಸದಿಗಿಂತ ಈ ಕಟ್ಟಡ ನಾಲ್ಕು ಪಟ್ಟು ದೊಡ್ಡದಾಗಿರಲಿದೆ.
ಸದ್ಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ 223 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಟರ್ಮಿನಲ್-2ರಲ್ಲಿ ಜಿಲ್ಲೆಯ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಪರಂಪರೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದರ ಭಾಗವಾಗಿ ಟರ್ಮಿನಲ್‌ನ ಇಡೀ ಕಟ್ಟಡವೇ ಕಮಲ ಬಸದಿ ವಿನ್ಯಾಸದಲ್ಲಿರಲಿದೆ.
ಈಗಾಗಲೇ ಶೇ.87ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಂಭಾಗದಲ್ಲಿ ಆಳೆತ್ತರದಲ್ಲಿ ಕಮಲ ಬಸದಿ ಮಾದರಿಯ ಕೆತ್ತನೆಯ ವಿನ್ಯಾಸದಲ್ಲಿರುವ ಕಂಬಗಳನ್ನು (ಪಿಲ್ಲರ್) ಅಳವಡಿಸಲಾಗಿದೆ. ಒಳಾಂಗಣದಲ್ಲೂ ಇದೇ ರೀತಿಯ ಕಂಬಗಳು ಇರಲಿದ್ದು, ಬಸದಿಯ ಮೊದಲ ಅಂಕಣದಲ್ಲಿರುವಂತೆ ಒಳ ಮೇಲ್ಭಾಗದ ವಿನ್ಯಾಸ ಇರಲಿದೆ. ಹೀಗಾಗಿ, ಈ ಟರ್ಮಿನಲ್ ಪ್ರವೇಶಿಸಿದಾಗ ಕಮಲ ಬಸದಿಯೊಳಗೆ ಪ್ರವೇಶಿಸಿದ ಅನುಭವ ಆಗಲಿದೆ.
ಸಾಮರ್ಥ್ಯ ಹೆಚ್ಚಳ: 
ಹೊಸ ಟರ್ಮಿನಲ್ ಏಕಕಾಲಕ್ಕೆ 2,400 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರಲಿದೆ. ವಿಮಾನಗಳ ಪಾರ್ಕಿಂಗ್ ಸಾಮರ್ಥ್ಯ 12 ವಿಭಾಗಗಳಿಗೆ ಹೆಚ್ಚಲಿದ್ದು, ಪ್ರಸ್ತುತ ಮೂರಕ್ಕೆ ಮಾತ್ರ ಅವಕಾಶವಿದೆ. ಇದಕ್ಕಾಗಿ 23 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. 13 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪ್ರಯಾಣಿಕರ ಬೋರ್ಡಿಂಗ್ ಸೇತುವೆ, ನಿರ್ಗಮನ ಮತ್ತು ಆಗಮನ ಪ್ರದೇಶದ ಕನ್ವೇಯರ್ ಗಳನ್ನೂ ಅಳವಡಿಸಲಾಗುತ್ತಿದೆ. ಇದರಲ್ಲಿ 14 ಚೆಕ್ ಇನ್ ಕೌಂಟರ್, 2 ಅರೈವಲ್ ಕನ್ವೇಯರ್‌ಗಳು 3.6 ಕೋಟಿ ರೂ. ವೆಚ್ಚದಲ್ಲಿ ಆಗುತ್ತಿವೆ. ಏ್ರಾನ್ ವಿಸ್ತರಣೆ, ಹೊಸ ಟ್ಯಾಕ್ಸಿ ಲಿಂಕ್ ಕಾಮಗಾರಿಯೂ ಪ್ರಗತಿಯಲ್ಲಿದೆ.

Spread the love

About Laxminews 24x7

Check Also

ಪಟ್ಟಿಯಿಂದಲೇ ಹೆಸರು ತೆಗೆಯುವ ಎಚ್ಚರಿಕೆ

Spread the loveಬೆಳಗಾವಿ :ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಭರ್ತಿ ಮಾಡಿದ ಅರ್ಜಿಯನ್ನು ವಾಪಸ್ ನೀಡದಿದ್ದರೆ ಮತದಾರರ ಪಟ್ಟಿಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ