ಬೆಳಗಾವಿ – ಸಿಕಂದರಾಬಾದ್ ನೂತನ ರೈಲು ಸೇವೆಗೆ ಚಾಲನೆ
ಬೆಳಗಾವಿ : ಹೊಸ ರೈಲು ಸೇವೆಯಿಂದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ರೈಲು ಸಂಪರ್ಕ ಮತ್ತಷ್ಟು ಬಲಪಡಲಿದ್ದು, ಪರಸ್ಪರ ಆರ್ಥಿಕ ಬಲವರ್ಧನೆಗೂ ಸಹಕಾರಿಯಾಗುವುದರೊಂದಿಗೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ಬೆಳಗಾವಿ–ಸಿಕಂದರಾಬಾದ್ ವಾರಾಂತ್ಯ ಎಕ್ಸ್ಪ್ರೆಸ್ ರೈಲಿಗೆ ಸೇವೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಇವರು ಚಾಲನೆ ನೀಡಿದರು. ಬೆಳಗಾವಿ–ಸಿಕಂದರಾಬಾದ್ ವಾರಾಂತ್ಯ ಎಕ್ಸ್ಪ್ರೆಸ್ ರೈಲು ನಿಯಮಿತ ಸಂಚಾರ ಆರಂಭಿಸಲಿದೆ.
ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 01:00 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 07:15 ಗಂಟೆಗೆ ಸಿಕಂದರಾಬಾದ್ ತಲುಪಲಿದೆ. ಮರಳಿ ರೈಲು ಸಂಖ್ಯೆ 17073 ಸಿಕಂದರಾಬಾದ್–ಬೆಳಗಾವಿ ವಾರಾಂತ್ಯ ಎಕ್ಸ್ಪ್ರೆಸ್ ಪ್ರತಿ ಸೋಮವಾರ ಸಿಕಂದರಾಬಾದ್ನಿಂದ 04:30 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 10:30 ಗಂಟೆಗೆ ಬೆಳಗಾವಿಗೆ ತಲುಪಲಿದೆ.
ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಅನೀಲ ಬೆನಕೆ, ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕ ಪ್ರೇಮಚಂದ್ರ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು
Laxmi News 24×7