Breaking News

ಮುಷ್ಕರಕ್ಕೂ ಮುನ್ನವೇ BMTC ನೌಕರರಿಗೆ ಗುಡ್‌ನ್ಯೂಸ್‌ – 11 ತಿಂಗಳ ಹಿಂಬಾಕಿ ವೇತನ ರಿಲೀಸ್‌

Spread the love

ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ನೌಕರರ ವೇತನ  ಹೆಚ್ಚಳದ ವಿಚಾರದ ಫೈಟ್ ಮುಂದುವರೆದಿದ್ದು, ಮೇ 20 ರಿಂದ ಅನಿರ್ಧಿಷ್ಟಾವದಿ ಮುಷ್ಕರದ ತಯಾರಿ ಜೊತೆಗೆ ಸರ್ಕಾರದ ಸಾಧನ ಸಮಾವೇಶಕ್ಕೂ ಹೋರಾಟದ ಬಿಸಿ ಮುಟ್ಟಿಸಲು ನೌಕರರು ಮುಂದಾಗಿದ್ದಾರೆ. ಈ ಹೊತ್ತಿನಲ್ಲೇ ಸಾರಿಗೆ ನೌಕರರಿಗೆ ಬಿಎಂಟಿಸಿ  ನೌಕರರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ.

11 ತಿಂಗಳ ಹಿಂಬಾಕಿ (ಅರಿಯರ್ಸ್‌) ವೇತನವನ್ನು ಬಿಎಂಟಿಸಿ ನೌಕರರ ಖಾತೆಗೆ ಸಾರಿಗೆ ಇಲಾಖೆ ಜಮೆ ಮಾಡಿದೆ. ರಾಜ್ಯ ಸರ್ಕಾರ 4 ನಿಗಮಗಳ ಸಾರಿಗೆ ನೌಕರರಿಗೆ 26 ತಿಂಗಳ ಹಿಂಬಾಕಿ ನೀಡಲು ನೀಡಲು ಇತ್ತೀಚೆಗೆ ಒಪ್ಪಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಹೀಗಾಗಿ ಇಂದು 11 ತಿಂಗಳ ಹಿಂಬಾಕಿ ಹಣವನ್ನ ಬಿಡುಗಡೆ ಮಾಡಿದ್ದು, ಬಿಎಂಟಿಸಿ ನೌಕರರಿ ಖಾತೆಗೆ ಜಮೆ ಮಾಡಲಾಗಿದೆ.

ಉಳಿದ 3 ನಿಗಮಗಳ ನೌಕರರಿಗೂ ಹಿಂಬಾಕಿ ಹಣ ಪಾವತಿಯಾಗಿದೆ. ಇನ್ನೂ 15 ತಿಂಗಳ ಹಿಂಬಾಕಿಯನ್ನ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದೆ.


Spread the love

About Laxminews 24x7

Check Also

ಮೊಬೈಲ್ ಟಾರ್ಚ್‌ ಹಿಡಿದು KKRTC ಬಸ್‌ ಚಾಲನೆ – ಮೂವರು ಅಮಾನತು

Spread the loveಕಲಬುರಗಿ: ಟಾರ್ಚ್‌ ಹಿಡಿದು ಬಸ್‌ ಚಲಾಯಿಸಿದ್ದ KKRTC ಅಧಿಕಾರಿಗಳು ಚಾಲಕ ಸೇರಿ ಮೂವರು ಸಿಬ್ಬಂದಿಯನ್ನು ಅಮಾನತು  ಮಾಡಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ