Breaking News

ಕೋಲ್ಕತ್ತಾ ʻಅಲೆʼನ್‌ ಆರ್ಭಟಕ್ಕೆ ಗುಜರಾತ್‌ ಥಂಡಾ – KKR ಗೆ 29 ರನ್‌ಗಳ ಅಮೋಘ ಜಯ

Spread the love

ಕೋಲ್ಕತ್ತಾ: ಫಿನ್‌ ಅಲೆನ್‌, ಅಂಗ್‌ಕ್ರಿಶ್ ರಘುವಂಶಿ ಹಾಗೂ ಕ್ಯಾಮರೂನ್‌ ಗ್ರೀನ್‌ ಬ್ಯಾಟಿಂಗ್‌ ಆರ್ಭಟ, ಬೌಲರ್‌ಗಳ ಕೈಚಳಕದಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ 29 ರನ್‌ಗಳ ಅಮೋಘ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 247 ರನ್‌ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಟೈಟಾನ್ಸ್‌ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 218 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಬೃಹತ್‌ ರನ್‌ ಚೇಸಿಂಗ್‌ ಆರಂಭಿಸಿದ ಗುಜರಾತ್‌ ಪರ ಶುಭಮನ್‌ ಗಿಲ್‌ ನಾಯಕನ ಆಟವಾಡಿದರು. ಜೋಸ್‌ ಬಟ್ಲರ್‌ ಜೊತೆಗೂಡಿ ಅಬ್ಬರಿಸುತ್ತಿದ್ದ ಗಿಲ್‌ ಪಂದ್ಯ ಗೆಲ್ಲಿಸುವ ಪಣ ತೊಟ್ಟಿದ್ದರು. ಗಿಲ್‌ ಅವರಿಗೆ ಜೋಸ್‌ ಬಟ್ಲರ್‌ ಹಾಗೂ ಸಾಯಿ ಸುದರ್ಶನ್‌ ಕೂಡ ಸಾಥ್‌ ನೀಡಿದ್ದರು. ಆದ್ರೆ 17ನೇ ಓವರ್‌ನಲ್ಲಿ ಗಿಲ್‌ ಅವರ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಟೈಟಾನ್ಸ್‌ ಗೆಲುವು ಕೂಡ ಕಸಿಯಿತು. ಗಿಲ್‌ 49 ಎಸೆತಗಳಲ್ಲಿ 58 ರನ್‌ ಬಾರಿಸಿದ್ರೆ, ಸುದರ್ಶನ್‌ ಅಜೇಯ 53 ರನ್‌, ಬಡ್ಲರ್‌ 57 ರನ್‌ ಕೊಡುಗೆ ನೀಡಿದರು.

ಅಲೆನ್‌ ಕೈತಪ್ಪಿದ ಶತಕ
ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ಕೆಕೆಆರ್‌ ಪರ ಫಿನ್‌ ಅಲೆನ್‌ ಸಿಕ್ಸರ್‌, ಬೌಂಡರಿಗಳ ಮಳೆಯನ್ನೇ ಸುರಿಸಿದರು. ಆರಂಭದಿಂದಲೇ ಟೈಟಾನ್ಸ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಅಲೆನ್‌ ಶತಕದ ಅನಿಹದಲ್ಲಿ ಔಟಾದರು. 265.71 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಲೆನ್‌ 35 ಎಸೆತಗಳಲ್ಲಿ 93 ರನ್‌ ಚಚ್ಚಿದ್ರು. ಆ ಬಳಿಕ ಜೊತೆಗೂಡಿದ ಕ್ಯಾಮರೂನ್‌ ಗ್ರೀನ್‌ ಹಾಗೂ ಅಂಗ್‌ಕ್ರಿಶ್ ರಘುವಂಶಿ ಮುರಿಯದ 3ನೇ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು.

ರಘುವಂಶಿ 44 ಎಸೆತಗಳಲ್ಲಿ 82 ರನ್‌ ಚಚ್ಚಿದ್ರೆ, ಗ್ರೀನ್‌ 28 ಎಸೆತಗಳಲ್ಲಿ 52 ರನ್‌ ಗಳಿಸಿ ಅಜೇಯರಾಗುಳಿದರು. ಇನ್ನೂ ನಾಯಕ ರಹಾನೆ 14 ಎಸೆತಗಳಲ್ಲಿ ಕೇವಲ 14 ರನ್‌ ಗಳಿಸಿ ಔಟಾದರು.


Spread the love

About Laxminews 24x7

Check Also

ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವು

Spread the loveಮಂಗಳೂರು: ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್‌ ಕುಸಿದು ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ  ಕುಂಟಿಕಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ