Breaking News

ಯತ್ನಾಳ್ ಒಬ್ಬ ಹುಚ್ಚ: ಶಾಸಕ ಆಸೀಫ್ ಸೇಠ್ ಆಕ್ರೋಶ

Spread the love

ಮುಸ್ಲಿಂ ಮತ ಬಿಜೆಪಿಗೆ ಬೇಡ ಎನ್ನುವ ಯತ್ನಾಳ್ ಒಬ್ಬ ಹುಚ್ಚ ಎಂದು ಬೆಳಗಾವಿ ಉತ್ತರ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅವರು ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಮೆಗೆ ಮುಸ್ಲಿಂರ ಮತಗಳು ಬೇಡ ಎಂದಿದ್ದಾರೆ. ಹಾಗಾಗಿ ಯತ್ನಾಳ ಒಬ್ಬ ಹುಚ್ಚ. ಅವನ ಮಾತು ಏನ್ ಕೇಳತ್ತಿರಾ. ಇವರ ತಪ್ಪು ಕಲ್ಪನೆಯಿಂದ ದೇಶ ಹಾಳಾಗುತ್ತಿದೆ. ಇವರು ಬೇಡ, ಅವರು ಬೇಡ ಎಂದು ಒಡೆದು ಹಾಳುತ್ತಿದ್ದಾರೆ. ಅವರು‌ ಹೇಳಲಿ ಎಲ್ಲರೂ ಒಗ್ಗಟ್ಟು ಆಗೋಣ ಅಂತ. ಅವರ ಮಾತಿನಿಂದ ರಾಜ್ಯ ಹಾಗೂ ದೇಶಕ್ಕೆ ನಷ್ಟ ಇದೆ ಎಂದು ಅಸಮಾದಾನ ಹೋರ ಹಾಕಿದರು.

ಬಾಗಲಕೋಟೆ ಮತ್ತು ದಾವಣಗೇರೆ ಉಪ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಎರಡು ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಎರಡು ಕಡೆ ನಾವೇ ಗೆಲ್ಲುತ್ತೇವೆ. ಜಿಲ್ಲಾ ಸಚಿವ ಸತೀಶ್ ಜಾರಕಿಹೊಳಿ ಅವರು ಬಾಗಲಕೋಟೆಯಲ್ಲಿ ಇದ್ದಾರೆ. ನಾನು ದಾವಣಗೇರೆ ಹೋಗಿ ಬಂದಿದ್ದೇನೆ ಎಂದು ತಿಳಿಸಿದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ