Breaking News

ಅತ್ತಿಗೆ ಮೇಲೆ ಕಣ್ಣಿಟ್ಟಿದ್ದ ಸಿಟ್ಟು..! ತಮ್ಮನ ಕೊಲೆಗೆ ಅಪ್ಪ ಸಾಥ್!

Spread the love

ತುಮಕೂರು ನಗರದ ಬನಶಂಕರಿ ಬಡಾವಣೆಯಲ್ಲಿ ರಕ್ತಸಂಬಂಧಗಳ ನಡುವಿನ ಕಲಹವೊಂದು ಭೀಕರ ಕೊ*ಲೆಯಲ್ಲಿ ಅಂತ್ಯಗೊಂಡಿದೆ. ತನ್ನ ಒಡಹುಟ್ಟಿದ ತಮ್ಮನನ್ನೇ ಅಣ್ಣ ಚಾಕುವಿನಿಂದ ಇರಿದು ಕೊಂ*ದಿದ್ದಾನೆ. ಇದರಲ್ಲಿ ಕುತೂಹಲದ ವಿಚಾರವೆಂದರೆ, ಮಗನ ಈ ಕ್ರೂರ ಕೃತ್ಯವನ್ನು ಮುಚ್ಚಿಹಾಕಲು ತಂದೆಯೂ ಸಾಥ್ ನೀಡಿದ್ದು, ವೈದ್ಯರ ಹೇಳಿಕೆ ಮತ್ತು ಪೊಲೀಸರ ತನಿಖೆಯಲ್ಲಿ ಅಸಲಿ ಕೊ*ಲೆ ಪ್ರಕರಣ ಬಯಲಿಗೆ ಬಂದಿದೆ. ಬನಶಂಕರಿ ನಿವಾಸಿ ಜಾನ್ ಪಾಲ್ ಎಂಬುವವರಿಗೆ ನವೀನ್ ಹಾಗೂ ಸ್ಟಾಲಿನ್ (29) ಎಂಬ ಇಬ್ಬರು ಮಕ್ಕಳಿದ್ದಾರೆ. ಕೊ*ಲೆಯಾದ ಸ್ಟಾಲಿನ್, ತನ್ನ ಅಣ್ಣ ನವೀನ್‌ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್ 22ರಂದು ಅಣ್ಣ-ತಮ್ಮಂದಿರ ನಡುವೆ ಮನೆಯಲ್ಲೇ ಗಲಾಟೆ ನಡೆದಿತ್ತು. ಆಕ್ರೋಶಗೊಂಡ ನವೀನ್ ಚಾಕುವಿನಿಂದ ತಮ್ಮ ಸ್ಟಾಲಿನ್‌ಗೆ ಇರಿದಿದ್ದ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದು ಸ್ಟಾಲಿನ್ ಹೊಟ್ಟೆಗೆ ಗಾಯವಾಗಿದೆ ಅಂತ ಅಪ್ಪ-ಮಗ ಸುಳ್ಳು ಕಥೆ ಕಟ್ಟಿ, ಸತ್ಯ ಮರೆಮಾಚುವ ಯತ್ನ ಮಾಡಿದ್ರು. ಒಂದಷ್ಟು ದಿನದ ಬಳಿಕ ಸ್ಟಾಲಿನ್ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದರು. ಸ್ಟಾಲಿನ್ ಗೆ ಆಗಿದ್ದ ಗಾಯಗಳನ್ನು ಗಮನಿಸಿದ್ದ ವೈದ್ಯರು, ಇದು ಕೊಲೆ ಅಂತ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಅಣ್ಣ ನವೀನ್, ಅಪ್ಪ ಜಾನ್ ಪಾಲ್ ರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಅಕ್ರಮ ಸಂಬಂಧದ ಶಂಕೆಯಿಂದ ನಡೆದ ಗಲಾಟೆ ಕೊ*ಲೆಯಲ್ಲಿ ಅಂತ್ಯವಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ಸದ್ಯ ಜಯನಗರ ಪೊಲೀಸರು ಕೊ*ಲೆ ಪ್ರಕರಣ ದಾಖಲಿಸಿಕೊಂಡು, ಅಣ್ಣ ನವೀನ್ ಮತ್ತು ಸಾಕ್ಷಿ ನಾಶಕ್ಕೆ ಯತ್ನಿಸಿದ ತಂದೆ ಜಾನ್ ಪಾಲ್ ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರೀತಿಯಿಂದ ಸಂಸಾರ ನಡೆಸಬೇಕಿದ್ದ ಮನೆಯಲ್ಲಿ ಅಕ್ರಮ ಸಂಬಂಧದ ಶಂಕೆ ಒಂದು ಜೀವವನ್ನು ಬಲಿ ಪಡೆದಿದೆ.


Spread the love

About Laxminews 24x7

Check Also

ಶಿವೈಕ್ಯ ಶಿವಕುಮಾರ ಶ್ರೀಗಳ ಜಯಂತಿ – ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಮುರ್ಮು

Spread the love ತುಮಕೂರು: ಏ.1ರಂದು ಶಿವೈಕ್ಯ ಶಿವಕುಮಾರ ಶ್ರೀಗಳ ಜನ್ಮ ದಿನೋತ್ಸವದ ಹಿನ್ನೆಲೆ ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ