Breaking News

ಶ್ರೇಷ್ಠ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಅವರು ಚಾಲನೆ

Spread the love

ರಾಮದುರ್ಗ: ಪ್ರತಿ ವಾರ ನಡೆಯುವ ಶ್ರೇಷ್ಠ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಇಂದು ಶಾಸಕ ರಮೇಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.

 

 

ಈ ಶನಿವಾರ ರಾಮದುರ್ಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಇದ್ದು, ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮ ಮೊಮ್ಮಗ ಸೂರ್ಯ ಶ್ರೇಷ್ಠ ಸಂತೋಷ್ ಜಾರಕಿಹೊಳಿ ಅವರ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮ ಕಂಡು ಖುಷಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಮೊಮ್ಮಗ ಸೂರ್ಯ ಶ್ರೇಷ್ಠ ಸಂತೋಷ್ ಜಾರಕಿಹೊಳಿ ಅವರ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮ ಹೀಗೆ ಮುಂದುವರೆಯಲಿ, ನಮ್ಮ ಮೊಮ್ಮಗ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಶುಭ ಹಾರೈಸಿದರು

 

ಈ ಸಂದರ್ಭದಲ್ಲಿ ಮುಖಂಡರು ಯಲ್ಲಪ್ಪಾ ಮಡ್ಡಿ. ಸಿದ್ದಪ್ಪಾ ಮಡ್ಡಿ. ಮೆಹಬೂಬಸಾಬ ಮುಜಾವರ. ಬಾಲನಗೌಡಾ ಪಾಟೀಲ.ಬಾಷಾ ಮುಜಾವರ. ಜೆ.ಆರ್. ಮಡ್ಡಿ. ಮಾರುತಿ ಶೆರೆಗಾರ. ಫಕೀರಪ್ಪಾ ಮಾದರ ಹಾಗೂ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ