Breaking News

ಸಿಎಂ ಕುರ್ಚಿ ವಿಚಾರದಲ್ಲಿನ ಗೊಂದಲಗಳಿಗೆ ಹೈಕಮಾಂಡ್ ಉತ್ತರ ಕೊಡಬೇಕು: ಪರಮೇಶ್ವರ್

Spread the love

ಬೆಂಗಳೂರು: ಸಿಎಂ ಕುರ್ಚಿ ವಿಚಾರದಲ್ಲಿನ ಗೊಂದಲಗಳಿಗೆ ಹೈಕಮಾಂಡ್ ಉತ್ತರ ಕೊಡಬೇಕು ಅಂತ ಗೃಹ ಸಚಿವ ಪರಮೇಶ್ವರ್ ಪುನರುಚ್ಚಾರ ಮಾಡಿದ್ದಾರೆ.

ಪರಮೇಶ್ವರ್ ಸಿಎಂ ಆಗಬೇಕು ಎಂಬ ಅಭಿಮಾನಿಗಳು ಕೂಗಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಕುರ್ಚಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಆಗಿದೆ. ನಾನು ಅದಕ್ಕೆ ಹೆಚ್ಚು ಗೊಂದಲ ಮಾಡೋದಕ್ಕೆ ತಯಾರಿಲ್ಲ. ಅನೇಕರು ನನ್ನನ್ನ ಪ್ರಶ್ನೆ ಮಾಡ್ತಾರೆ, ಅಭಿಮಾನಿಗಳು ಅಲ್ಲಲ್ಲಿ ಸಿಎಂ  ಅಗಬೇಕು ಅಂತ ಅವರ ಭಾವನೆ ವ್ಯಕ್ತಪಡಿಸುತ್ತಾರೆ. ಸಿಎಂ ಆಗಬೇಕು ಅಂತ ಘೋಷಣೆ ಕೂಗ್ತಾರೆ. ಇದಕ್ಕೆಲ್ಲಾ ಉತ್ತರ ಹೈಕಮಾಂಡ್ ಕೊಡಬೇಕು. ಹೈಕಮಾಂಡ್ ಯಾವ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೋ ಆ ಸಮಯದಲ್ಲಿ ತೀರ್ಮಾನ ಮಾಡ್ತಾರೆ. ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡೋದ್ರಲ್ಲಿ ಅರ್ಥ ಇಲ್ಲ. ಏಕೆಂದ್ರೆ ಅದರ ಬಗ್ಗೆ ಉತ್ತರ ಸಿಗೊಲ್ಲ. ಉತ್ತರ ಸಿಗಬೇಕಾಗಿರೋದು ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೆ ಅದರಿಂದ ಎಂದಿದ್ದಾರೆ.

ನಾನು ಯಾವತ್ತು ಲಾಬಿ ಮಾಡೋಕೆ ಹೋಗಿಲ್ಲ. ನಾನು ದೆಹಲಿಗೆ ಹೋಗಿಲ್ಲ .ನಾನು ಯಾವ ಲಾಬಿ ಮಾಡ್ತಿಲ್ಲ. ಅಲ್ಲಿ ‌ಇಲ್ಲಿ ನಮ್ಮ ಹಿತೈಷಿಗಳು ಅಭಿಪ್ರಾಯ ಹೇಳಿರಬಹುದು. ಮಾಡಬೇಡಿ ಅಂತ ಹೇಳೋದು ಹೇಗೆ? 2-3 ಸಾರಿ ಹಾಗೆ ಮಾಡಬೇಡಿ ಅಂತ ಬೈದಿದ್ದೇನೆ. ಆದರೆ ಅವರ ಫೀಲಿಂಗ್ಸ್ ಎಕ್ಸ್ ಪ್ರೆಸ್ ಮಾಡ್ತಾರೆ. ಅದಕ್ಕೆ ನಾವೇನು ಮಾಡೋಕೆ ಆಗೊಲ್ಲ. ನಾನು ಈ ಗೊಂದಲಕ್ಕೆ ಕೈ ಜೋಡಿಸೋದಕ್ಕೆ ಹೋಗೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೂ ರಾಜ್ಯದಲ್ಲಿ 15 ಸಾವಿರ ಮಕ್ಕಳು ಕಾಣೆಯಾಗಿದ್ದಾರೆ  ಎಂಬ ವರದಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳು ಮಿಸ್ಸಿಂಗ್ ಅಂತ ನಮಗೆ ಮಾಹಿತಿ ಕೊಡ್ತಾರೆ. ಜಿಲ್ಲೆಗಳಲ್ಲಿ ಇಲಾಖೆ ರಿವ್ಯೂ ಮಾಡೋವಾಗ ಈ ವಿಷಯವನ್ನ ಗಂಭೀರವಾಗಿ ತೆಗೆದುಕೊಳ್ತೀನಿ. ರಾಜ್ಯದಲ್ಲೂ ಮಿಸ್ಸಿಂಗ್ ಅಂತ ಬರೋ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ತೀವಿ. ಮಿಸ್ಸಿಂಗ್ ಆದ ಬಹಳ ಮಕ್ಕಳನ್ನ ಹುಡುಕಿದ್ದಾರೆ. ಇನ್ನು ಬಹಳಷ್ಟು ಜನ ಮಿಸ್ಸಿಂಗ್ ಆಗಿದ್ದಾರೆ. ಈ ಬಗ್ಗೆ ಏನ್ ಕ್ರಮ ತೆಗೆದುಕೊಳ್ಳಬೇಕೋ ಅ ಕ್ರಮ ತೆಗೆದುಕೊಳ್ತೀವಿ ಅಂತ ಭರವಸೆ ನೀಡಿದ್ದಾರೆ.


Spread the love

About Laxminews 24x7

Check Also

ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ದೆಹಲಿಗೆ ಭೇಟಿ ನೀಡೋದ್ರಲ್ಲಿ ತಪ್ಪಿಲ್ಲ: ಸಿದ್ದರಾಮಯ್ಯ

Spread the loveಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ