Breaking News

ಯಾರಿಗೂ ಅನ್ಯಾಯವಾಗದು ಅಪಪ್ರಚಾರಕ್ಕೆ ಕಿವಿಗೊಡಬೇಡಿ

Spread the love

ಬೆಳಗಾವಿ:ಬಿಡಿಸಿಸಿ ಬ್ಯಾಂಕ್‌ ಗ್ರಾಹಕರು ಅಪಪ್ರಚಾರಕ್ಕೆ ಕಿವಿಕೊಡಬೇಡಿ. ಬ್ಯಾಂಕನ್ನು ಚೆನ್ನಾಗಿ ನಡೆಸುತ್ತೇವೆ. ಯಾವ ರೈತರಿಗೂ, ಗ್ರಾಹಕರಿಗೂ ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.

ಸಿಪಿಇಡಿ ಮೈದಾನದಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಕೊಡಲು ಉದ್ದೇಶಿಸಿರುವ ಹೊಸ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬ್ಯಾಂಕಿನ ಮೇಲೆ ಗ್ರಾಹಕರು ವಿಶ್ವಾಸ ಇಟ್ಟುಕೊಂಡು ಹೋಗಬೇಕು. ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಅವರು ಚುನಾವಣೆ ಮಾಡಿ ಈ ಆಡಳಿತ ನಡೆಸಬೇಕೆಂದು ನಮ್ಮ ಹತ್ತಿರ ಕೊಟ್ಟಿದ್ದೀರಿ. ಈ ಐದು ವರ್ಷದಲ್ಲಿ ಲೆಕ್ಕ ತಪ್ಪಿದರೆ ಎಲ್ಲಿ ಬೇಕಾದರೆ ನಿಂತು ನಮ್ಮನ್ನು ಕೇಳಿ’ ಎಂದು ಸವಾಲು ಹಾಕಿದರು.

‘ಅಧಿಕಾರಿ ಬಿಟ್ಟು ಹೋದ ನಂತರ ಒಂದಿಷ್ಟು ಮಂದಿಗೆ ಬಹಳ ತೊಂದರೆಯಾಗಿದೆ. ರಾಜಕಾರಣದಲ್ಲಿ ಆರೋಪ ಸಾಮಾನ್ಯ. ಆದರೆ ಗ್ರಾಹಕರು ಮಾತ್ರ ಅಪಪ್ರಚಾರ ಕಿವಿಗೆ ಹಾಕಿಕೊಳ್ಳಬೇಡಿ. ನಿಮಗೇನಾದರೂ ಸಂಶಯ ಬಂದರೆ ಬ್ಯಾಂಕಿನ ಅಧ್ಯಕ್ಷ ಹಾಗೂ ನಮ್ಮನ್ನು ಕೇಳಿದರೆ ದೇವರ ಸಾಕ್ಷಿಯಾಗಿ ನಾವು ಉತ್ತರ ಕೋಡುತ್ತೇವೆ’ ಎಂದರು.

‘ಬಾಲಚಂದ್ರ ಜಾರಕಿಹೊಳಿ ಅವರಿಗೂ ಬಿಡಿಸಿಸಿ ಬ್ಯಾಂಕಿಗೂ ಏನು ಸಂಬಂಧ ಎಂದು ಪದೇಪದೇ ಕೇಳುತ್ತಿದ್ದಾರೆ. ಇದನ್ನು ಸಹಿಸದವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಬ್ಯಾಂಕಿನ ಪ್ರತಿ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತೇನೆ. ಯಾರು, ಏನೆಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು.

‘ಅಣ್ಣಾಸಾಬ್ ಜೊಲ್ಲೆ ಅವರು ಪ್ರತಿಯೊಂದು ಲೆಕ್ಕ ಹಾಕಿ ಬ್ಯಾಂಕ್‌ ನಡೆಸುತ್ತಿದ್ದಾರೆ. ಮಂಗಳೂರು ಡಿಸಿಸಿ ಬ್ಯಾಂಕ್ ರಿಕಾರ್ಡ್‌ ನಾವೇ ಮುರಿಯೋಣ ಎಂದು ಹಠ ತೊಟ್ಟಿದ್ದೇವೆ. ಮನುಷ್ಯ ಎಂದ ಮೇಲೆ ತಪ್ಪು ಮಾಡುವುದು ಸಹಜ. ಆದರೆ ಅದೇ ತಪ್ಪನ್ನು ಹೆಚ್ಚು ತೋರಿಸಲಾಗುತ್ತದೆ. ಈಗ ಬೆಳಗಾವಿ ಹಾಲು ಒಕ್ಕೂಟವನ್ನು ಜಿರೋ ಇದ್ದದ್ದನ್ನು ₹13 ಕೋಟಿ ಲಾಭ ಬರುವಂತೆ ಮಾಡಿದ್ದೇನೆ. ಅದರ ಬಗ್ಗೆ ಯಾರೂ ನಾತನಾಡುವುದಿಲ್ಲ’ ಎಂದೂ ಪ್ರಶ್ನಿಸಿದರು.

ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ್‌ ಜೊಲ್ಲೆ ಮಾತನಾಡಿ, ‘ನವೆಂಬರ್‌ ತಿಂಗಳಲ್ಲಿ ನೂತನ ಆಡಳಿತ ಮಂಡಳಿ ಬಿಡಿಸಿಸಿ ಬ್ಯಾಂಕಿನ ಚುಕ್ಕಾಣಿ ಹಿಡಿದ ನಂತರ ಬಿಡಿಸಿಸಿ ಬ್ಯಾಂಕ್‌ ಠೇವಣಿ ಕಡಿಮೆಯಾಗಿತ್ತು. ಇದಕ್ಕೆ ಕೆಲವರು ಮಾಡಿದ ಅಪಪ್ರಚಾರ ಕಾರಣ. ಪ್ರಸ್ತುತ ಬ್ಯಾಂಕಿನಲ್ಲಿ ₹544 ಕೋಟಿ ಠೇವಣಿ ಹೆಚ್ಚಿಗೆಯಾಗಿದೆ. ಕಳೆದ ಒಂದು ವಾರದಿಂದ ದಿನಕ್ಕೆ ₹25 ಕೋಟಿ ಠೇವಣಿ ಹೆಚ್ಚಳವಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಬ್ಯಾಂಕ್‌ ನಿರ್ದೇಶಕರಾದ ಅರವಿಂದ ಪಾಟೀಲ್, ಅಪ್ಪಾಸಾಹೇಬ್ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ಗಣೇಶ ಹುಕ್ಕೇರಿ, ಚನ್ನರಾಜ್ ಹಟ್ಟಿಹೊಳಿ, ರಾಹುಲ್ ಜಾರಕಿಹೊಳಿ, ವಿರುಪಾಕ್ಷಿ ಮಾಮನಿ, ಮಲ್ಲಪ್ಪ ಯಾದವಾಡ, ನಾನಾಸಾಹೇಬ್ ಪಾಟೀಲ, ಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಲಾವಂತ, ಐ.ಸಿ. ಕಲ್ಮಠ, ಸಂಗಯ್ಯ ಹಿರೇಮಠ, ಪ್ರಕಾಶ ಬ್ಯಾಳಿಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಪಿಕೆಪಿಎಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.


Spread the love

About Laxminews 24x7

Check Also

ಕರ್ನಾಟಕ ಬಜೆಟ್ 2026: ರೈತ ಸಂಘದ ಬೇಡಿಕೆಗಳು

Spread the loveಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 17ರಂದು ಕರ್ನಾಟಕ ಬಜೆಟ್ 2026-27 ಮಂಡಿಸಲಿದ್ದಾರೆ. ಬಜೆಟ್ ಪೂರ್ವಭಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ