Breaking News

ಮಾಧ್ಯಮಗಳನ್ನ ಹತ್ತಿಕ್ಕಲು ಹೊರಟ ಸರ್ಕಾರ – ಶಕ್ತಿಸೌಧದಲ್ಲಿ ಭದ್ರತಾ ಲೋಪ ಬಯಲಿಗೆಳೆದಿದ್ದೇ ತಪ್ಪಾ..?

Spread the love

ಬೆಂಗಳೂರು: ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧದ ಬಳಿಕ ಮತ್ತೆ ವಿಧಾನಸೌಧದಲ್ಲಿ ಭದ್ರತೆಯ ನೆಪವೊಡ್ಡಿ ಮಾಧ್ಯಮಗಳಿಗೆ ನಿರ್ಬಂಧ ಹಾಕುವ ಕೆಲಸಕ್ಕೆ ರಾಜ್ಯ ಸರ್ಕಾರ  ಮುಂದಾಗಿದೆ.

ಸೂಚಿಸಿದ ಸ್ಥಳದಲ್ಲಿ ಮಾತ್ರ ಜನಪ್ರತಿನಿಧಿಗಳನ್ನ ಮಾತನಾಡಿಸಬೇಕು ಎಂಬ ನಿಯಮ ತಂದು ಮಾಧ್ಯಮಗಳ ಸ್ವಾತಂತ್ರ‍್ಯ (Media Freedom) ಕಸಿಯೋ ಕೆಲಸಕ್ಕೆ ಕೈ ಹಾಕಿದೆ.
ಪ್ರಜಾಪ್ರಭುತ್ವದ 4ನೇ ಸ್ತಂಭ ಎಂದೇ ಕರೆಯಲ್ಪಡುವ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಮಾಧ್ಯಮ ಸ್ವಾತಂತ್ರ‍್ಯದ ಬಗ್ಗೆ ಮಾತನಾಡುವ ಸರ್ಕಾರವೇ ಈಗ ಮಾಧ್ಯಮಗಳ ಮೇಲೆ ಸವಾರಿ ಮಾಡಲು ಹೊರಟಿದೆ. ವಿಧಾನಸೌಧದಲ್ಲಿ ಮಾಧ್ಯಮಗಳನ್ನ ಹತ್ತಿಕ್ಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮತ್ತೆ ಮುಂದಾಗಿದೆ. ಭದ್ರತೆಯ ನೆಪವೊಡ್ಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾಧ್ಯಮಗಳಿಗೆ ಹೊಸ ಲಕ್ಷ್ಮಣ ರೇಖೆ ಎಳೆದಿದೆ.

ಮಾಧ್ಯಮಗಳನ್ನ ನಿಗದಿತ ಸ್ಥಳಕ್ಕೆ ಮಾತ್ರ ನಿಯಂತ್ರಣ ಮಾಡುವ ಹುನ್ನಾರ ಮಾಡಿದೆ. ಮಾಧ್ಯಮಗಳಿಂದ ಭದ್ರತೆಗೆ ಸಮಸ್ಯೆ ಆಗ್ತಿದೆ ಅಂತ ಹೇಳಿ ಇನ್ನು ಮುಂದೆ ವಿಧಾನಸೌಧದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಜನಪ್ರತಿನಿಧಿಗಳ ಪ್ರತಿಕ್ರಿಯೆ ಪಡೆಯಬೇಕು ಅಂತ ನಿಯಮ ಮಾಡಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ವಾರ್ತಾ ಇಲಾಖೆಗೆ ಈ ಸಂಬಂಧ ಪತ್ರ ಬರೆದಿದ್ದು, ಭದ್ರತೆಯ ನೆಪವೊಡ್ಡಿ ಮಾಧ್ಯಮಗಳ ಮೇಲೆ ಸರ್ಕಾರ ಸವಾರಿ ಮಾಡಲು ಹೊರಟಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ತರೋ ಕೆಲಸಕ್ಕೆ ಸರಕಾರವೇ ಮುಂದಾಗಿದೆ.

ಪದೇ ಪದೇ ವಿಧಾನಸೌಧದಲ್ಲಿ ಭದ್ರತೆಯ ಲೋಪ ಕಂಡು ಬರ್ತಿದೆ. ಇದನ್ನ ಮಾಧ್ಯಮಗಳು ತೋರಿಸುತ್ತಿರೋದೆ ದೊಡ್ಡ ಅಪರಾಧವಾಗಿದೆ. ಕಳೆದ ವಾರ ಸಿಬ್ಬಂದಿ ಮತ್ತು ಆಡಳಿತ ಸುಧಾಕರಣೆ ಇಲಾಖೆ ಸಿಬ್ಬಂದಿಯಿಂದಲೇ 300 ಗ್ರಾಂ ಚಿನ್ನದ ಸರ ಸಚಿವರ ಕೊಠಡಿಯಿಂದ ಕಳ್ಳತನ ಆಗಿತ್ತು. ಈಗ ತನ್ನ ಲೋಪದೋಷಗಳನ್ನ ಮುಚ್ಚಿಕೊಳ್ಳಲು ಮಾಧ್ಯಮಗಳ ಮೇಲೆ ನಿರ್ಬಂಧ ಅಸ್ತ್ರವನ್ನ ಡಿಪಿಎಆರ್ ಬಳಕೆ ಮಾಡಿದೆ. ಡಿಪಿಎಆರ್ ತಾಳಕ್ಕೆ ತಕ್ಕಂತೆ ವಾರ್ತಾ ಇಲಾಖೆ ಕುಣಿಯಲು ಹೊರಟಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಾರ್ತಾ ಇಲಾಖೆಗೆ ಪತ್ರ ಬರೆದಿದ್ದು, ಮಾಧ್ಯಮಗಳಿಗೆ ಕೆಲವು ಕಠಿಣ ಸೂಚನೆಗಳನ್ನ ನೀಡುವಂತೆ ತಿಳಿಸಿದೆ. ಇನ್ಮುಂದೆ ವಿಧಾನಸೌಧದಲ್ಲಿ ಎಲ್ಲೆಂದರಲ್ಲಿ ರಾಜಕೀಯ ನಾಯಕರ ಹೇಳಿಕೆ ಪಡೆಯುವಂತಿಲ್ಲ. ಕೇವಲ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಬೈಟ್ ಪಡೆಯಬೇಕು. ವಿಧಾನಸೌಧದ ಕಾರಿಡಾರ್‌ಗಳು ಅಥವಾ ಇತರ ಪ್ರಮುಖ ಸ್ಥಳಗಳಲ್ಲಿ ನಾಯಕರ ಅಭಿಪ್ರಾಯ ಪಡೆಯುವುದಕ್ಕೆ ನಿರ್ಬಂಧ ಹೇರಲಾಗಿದೆ.
ಇಲ್ಲಿಯವರೆಗೆ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಕಾರಿಡಾರ್‌ಗಳಲ್ಲಿ, ಸಚಿವರ ಕೊಠಡಿಗಳ ಬಳಿ ಅಥವಾ ಮುಖ್ಯಮಂತ್ರಿಗಳ ಕಚೇರಿಯ ಹೊರಗೆ ರಾಜಕೀಯ ನಾಯಕರನ್ನು ಕಂಡಾಗ ತಕ್ಷಣವೇ ಪ್ರತಿಕ್ರಿಯೆ ಪಡೆಯುತ್ತಿದ್ದರು. ಆದರೆ, ಹೊಸ ನಿಯಮದ ಪ್ರಕಾರ ಮಾಧ್ಯಮದವರು ಎಲ್ಲೆಂದರಲ್ಲಿ ಕ್ಯಾಮೆರಾ ಹಿಡಿದು ನಿಲ್ಲುವಂತಿಲ್ಲ. ಇದು ರಾಜಕೀಯ ಬೆಳವಣಿಗೆಗಳ ಮೇಲೆ ಕ್ಷಣಕ್ಷಣದ ನಿಗಾ ಇಡುವ ಮಾಧ್ಯಮಗಳ ವೇಗಕ್ಕೆ ಅಡ್ಡಿಯಾಗಲಿದೆ.ಸರ್ಕಾರವು ವಿಧಾನಸೌಧದಲ್ಲಿ ನಿರ್ದಿಷ್ಟವಾದ ಒಂದು ಅಥವಾ ಎರಡು ಸ್ಥಳಗಳನ್ನು ಮಾತ್ರ ‘ಮೀಡಿಯಾ ಪಾಯಿಂಟ್’ ಎಂದು ಗುರುತಿಸಲಿದೆ. ರಾಜಕೀಯ ನಾಯಕರು ಅಥವಾ ಸಚಿವರು ತಮಗೆ ಇಷ್ಟವಿದ್ದರೆ ಮಾತ್ರ ಆ ಸ್ಥಳಕ್ಕೆ ಬಂದು ಹೇಳಿಕೆ ನೀಡಬೇಕಾಗುತ್ತದೆ.

ವಿಧಾನಸೌಧದ ಕಾರಿಡಾರ್‌ಗಳು (ಪಡಸಾಲೆಗಳು) ಪ್ರಮುಖ ಚರ್ಚೆಗಳು ನಡೆಯುವ ತಾಣಗಳು. ಇಲ್ಲಿ ನಾಯಕರನ್ನ ಪ್ರಶ್ನಿಸುವುದು ಪತ್ರಕರ್ತರಿಗೆ ಸುಲಭವಾಗಿತ್ತು. ಈಗ ಇಲ್ಲಿ ಬೈಟ್ ಪಡೆಯುವುದನ್ನು ನಿಷೇಧಿಸಿರುವುದರಿಂದ, ಒಳಗಡೆ ನಡೆಯುವ ಭ್ರಷ್ಟಾಚಾರ ಅಥವಾ ಭದ್ರತಾ ಲೋಪಗಳಂತಹ ವಿಚಾರಗಳನ್ನು ಪ್ರಶ್ನಿಸಲು ಮಾಧ್ಯಮಗಳಿಗೆ ಅವಕಾಶವೇ ಸಿಗದಂತೆ ಮಾಡುವ ತಂತ್ರ ಇದಾಗಿದೆ.ಸರ್ಕಾರದ ತಪ್ಪುಗಳನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಥವಾ ಕಾರಿಡಾರ್‌ಗಳಲ್ಲಿ ನಿಂತು ಮಾಧ್ಯಮಗಳ ಮುಂದೆ ವಿರೋಧ ಪಕ್ಷದ ನಾಯಕರು ಬಿಚ್ಚಿಡುತ್ತಿದ್ದರು. ಈಗ ‘ನಿಗದಿತ ಸ್ಥಳ’ದ ನಿಯಮದಿಂದಾಗಿ ವಿರೋಧ ಪಕ್ಷದ ನಾಯಕರು ಮಾಧ್ಯಮಗಳಿಗೆ ಸಿಗದಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಸಂಶಯ ದಟ್ಟವಾಗಿದೆ.ಇತ್ತೀಚೆಗೆ ವಿಧಾನಸೌಧದ ಹೈ-ಸೆಕ್ಯೂರಿಟಿ ವಲಯದಲ್ಲೇ ನಡೆದ ಚಿನ್ನದ ಕಳ್ಳತನದಂತಹ ಪ್ರಕರಣಗಳು ಸರ್ಕಾರದ ಭದ್ರತಾ ವೈಫಲ್ಯವನ್ನ ತೋರಿಸಿದ್ದವು. ಮಾಧ್ಯಮಗಳು ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸುಳಿದಾಡುವುದರಿಂದ ಈ ಲೋಪಗಳು ಪದೇ ಪದೇ ಜಗಜ್ಜಾಹೀರಾಗುತ್ತಿವೆ ಎಂಬುದು ಸರ್ಕಾರದ ಅಸಮಾಧಾನ.

ಕಳೆದ ವಾರವಷ್ಟೇ ವಿಧಾನಸೌಧದ ಒಳಗಡೆ 300 ಗ್ರಾಂ ಚಿನ್ನದ ಕಳ್ಳತನವಾಗಿತ್ತು. ಇದು ಸರ್ಕಾರದ ಭದ್ರತಾ ಲೋಪವನ್ನು ಜಗಜ್ಜಾಹೀರು ಮಾಡಿತ್ತು. ಪದೇ ಪದೇ ಬಹಿರಂಗವಾಗುತ್ತಿರುವ ಭದ್ರತಾ ಲೋಪಗಳ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಬಾರದು ಮತ್ತು ಸರ್ಕಾರದ ನಕಾರಾತ್ಮಕ ಸುದ್ದಿಗಳನ್ನು ಹತ್ತಿಕ್ಕಬೇಕು ಎಂಬ ಉದ್ದೇಶ ಈ ಆದೇಶದ ಹಿಂದೆ ಇದೆಯೇ ಎಂಬ ಸಂಶಯ ಮೂಡಿದೆ.


Spread the love

About Laxminews 24x7

Check Also

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ – ಸರ್ಕಾರದ ಹೇಡಿತನಕ್ಕೆ ಸಾಕ್ಷಿ: ಜೆಡಿಎಸ್

Spread the loveಬೆಂಗಳೂರು: ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಮಾಡಿರೋ ಸರ್ಕಾರದ ನಡೆಯನ್ನ ಜೆಡಿಎಸ್ ಖಂಡಿಸಿದೆ. ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರೋ ಜೆಡಿಎಸ್, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ