Breaking News

ಆಡಳಿತದ ಪಕ್ಷಕ್ಕೆ ಇಲ್ಲಿನ ನಾಯಕತ್ವದಲ್ಲಿ ವಿಶ್ವಾಸ ಇಲ್ಲ: ಸಿ.ಟಿ.ರವಿ

Spread the love

ಬೆಂಗಳೂರು: ಆಡಳಿತ ಪಕ್ಷದ ಶಾಸಕರಿಗೆ ಇಲ್ಲಿನ ನಾಯಕತ್ವದಲ್ಲಿ ವಿಶ್ವಾಸ ಇಲ್ಲ. ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಶಾಸಕರು ವಿದೇಶ ಪ್ರವಾಸಕ್ಕೆ ಹೋಗ್ತಾ ಇದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಕಾಂಗ್ರೆಸ್ ಶಾಸಕರ ಫಾರಿನ್ ಟ್ರಿಪ್‌ಗೆ ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಲ್ಲಿರೋ ರಾಜಕೀಯ ನೇತೃತ್ವ, ಇಲ್ಲಿನ ವ್ಯವಸ್ಥೆ ನ್ಯಾಯ ಕೊಡೋಕೆ ಸಾಧ್ಯವಿಲ್ಲ ಅಂತ ಆಡಳಿತ ಪಕ್ಷದ ಶಾಸಕರಿಗೆ ಅನ್ನಿಸಿದೆ. ಇದಕ್ಕೆ ವಿದೇಶದಲ್ಲಿ ಪರಿಹಾರ ಸಿಗಬಹುದು ಎಂಬ ಆಶಾ ಭಾವನೆಯಲ್ಲಿ ಹೋಗ್ತಾ ಇದ್ದಾರೆ. ಯಾರು ತಪ್ಪು ತಿಳಿಯಬೇಡಿ. ಅವರ ನಾಯಕತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ. ಸಮಸ್ಯೆ ಬಗೆಹರಿಸೋ ವಿಶ್ವಾಸ ಇಲ್ಲ. ವಿದೇಶಕ್ಕೆ ಪರಿಹಾರ ಹುಡುಕಿಕೊಂಡು ಹೋಗ್ತಾ ಇದ್ದಾರೆ. ಅವರ ಬಗ್ಗೆ ತಪ್ಪು ತಿಳಿಯಬೇಡಿ. ಅವರಿಗೆ ಪ್ರೋತ್ಸಾಹ ಕೊಡಿ. ಇಲ್ಲಿನ ಸಮಸ್ಯೆ, ಅನ್ಯಾಯದ ವಿರುದ್ಧ ಪ್ರತಿಭಟಿಸಿ ಫಾರಿನ್‌ಗೆ ಹೋಗ್ತಾ ಇದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ತಾಯಿ-ಮಗು ಗುಂಡಿಗೆ ಬಲಿಯಾಗಿದ್ದಾರೆ. ನೂರಾರು ಜನ ಬೆಂಗಳೂರು ಗುಂಡಿಗೆ ಬಲಿಯಾಗಿದ್ದಾರೆ. ಅಭಿವೃದ್ಧಿ ನಿಂತ ನೀರಾಗಿದೆ. ಪರಿಹಾರದ ಹಣ ಕೊಡದೇ ಇರೋದಕ್ಕೆ ಏSಖಖಿಅಗೆ ಬಸ್ ಸೀಜ್ ಆಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಈ ದೇಶದಲ್ಲಿ ಇಲ್ಲ ಅಂತ ಅವರ ಶಾಸಕರಿಗೆ ಅನ್ನಿಸಿದೆ. ಇದರ ಪರಿಹಾರಕ್ಕಾಗಿ ಅರಬ್, ಯುರೋಪ್‌ನಲ್ಲಿ ಸಿಗುತ್ತೆ ಅಂತ ವಿದೇಶಕ್ಕೆ ಹೋಗ್ತಾ ಇದ್ದಾರೆ ಅನ್ನಿಸುತ್ತೆ ಎಂದಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ