ಬೆಂಗಳೂರು: ಮುಂದಿನ ಸಲ ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣ ಮಹಿಳಾ ಮೀಸಲಾತಿ ಬಂದ್ರೆ ಪುತ್ರಿ ರಶ್ಮಿ ರಾಜಣ್ಣ ರನ್ನ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಸಿಎಂ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿ, ಮುಂದೆ ಮಹತ್ವದ ರಾಜಕೀಯ ಬದಲಾವಣೆ ಆಗುತ್ತೆ ಅಂತ ಅಂದುಕೊಂಡ್ರೆ ಸುಳ್ಳು. ಸಿದ್ದರಾಮಯ್ಯ ಅವರು ಗಟ್ಟಿಯಾಗಿ ವಿಶ್ವಾಸದಲ್ಲಿದ್ದಾರೆ, ಬಜೆಟ್ ಮಂಡಿಸ್ತಿದ್ದಾರೆ ಅಂದ್ರೆ ಅಷ್ಟು ಕಾನ್ಫಿಡೆನ್ಸ್ ಇದೆ ಅಂತಾಯ್ತಲ್ಲ. ಅಲ್ಲಿಗೆ ಯಥಾಸ್ಥಿತಿ ಅಂತಲೇ ಅರ್ಥ ಎಂದು ನುಡಿದರು. ಕಳೆದ ವರ್ಷ ರಾಜಣ್ಣ ಅವ್ರೇ ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನೂ ಶಾಸಕರು, ಪರಿಷತ್ ಸದಸ್ಯರ ಫಾರಿನ್ ಟ್ರಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾನು ಹೋದಷ್ಟು ಫಾರಿನ್ ಟ್ರಿಪ್ ಯಾರೂ ಹೋಗಲ್ಲ. ನಾನು ಜೊತೆಯಲ್ಲಿ ಕರಕೊಂಡೂ ಹೋಗಲ್ಲ ಬಂದ ಮೇಲೂ ಹೇಳಲ್ಲ. ದಟ್ಸ್ ಮೈ ಸ್ಟೈಲ್. ಖಾಸಗಿ ಬದುಕಲ್ಲಿ ಯಾರಾದರೂ ಶಾಸಕರು ಸ್ವಂತ ಖರ್ಚಲ್ಲಿ ಹೊರಗೆ ಹೋದ್ರೆ, ಅದು ಸರಿಯಲ್ಲ ಅಂತ ಅವಹೇಳನ ಮಾಡುವ ಪದ್ದತಿ ಯಾಕೆ ಬರ್ತಿದೆ? ರಾಜಕೀಯ ಅರ್ಥವನ್ನ ಯಾವ ಯಾವ ರೀತಿ ಅರ್ಥೈಸ್ತೀರೋ ಗೊತ್ತಿಲ್ಲ. ಪಾಲಿಟಿಕ್ಸ್ ಪ್ರತಿಯೊಂದರಲ್ಲೂ ಇದ್ದೇ ಇರುತ್ತದೆ. ಸದುದ್ದೇಶದಿಂದ ಮಾಡುವ ವಿದೇಶ ಪ್ರವಾಸಕ್ಕೆ ಹೋಗಿ ಬರಲಿ, ಅದನ್ನು ತಪ್ಪು ಎನ್ನುವುದು ಸರಿಯಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ರು.
ವಿದೇಶದಲ್ಲಿ ನಮಗೆ ಒಳ್ಳೆಯದಾಗುವ ಕೆಲವು ಸಂಗತಿಗಳು ಇರುತ್ತವೆ. ಅದನ್ನು ತಿಳಿದುಕೊಂಡು ಬಂದು ಇಲ್ಲಿ ಅಳವಡಿಸಿಕೊಂಡರೆ ಒಳ್ಳೆಯದೇ ಅಲ್ವಾ? ಯಾವ ಯಾವ ಪ್ರಪಂಚದ ದೇಶಗಳಲ್ಲಿ ರೈತರಿಗೆ ಅನುಕೂಲ ಆಗುವ ಪದ್ದತಿ ಇರುತ್ತದೆಯೋ ಅದು ಕಲಿತು ಬರಲಿ ಯಾಕೆ ಪ್ರವಾಸವನ್ನ ತಡೆಯುತ್ತಾರೋ ಗೊತ್ತಿಲ್ಲ. ಅದಕ್ಕೆ ಕಠಿಣ ಪದ ಬಳಸಿದರೆ ಅದು ತಪ್ಪಾಗುತ್ತದೆ. ರಾಜಕಾರಣದಲ್ಲಿ ಎಲ್ಲರೂ ಒಂದೇ ತರಹ ಇರುತ್ತಾರಾ..? ಸಿದ್ದರಾಮಯ್ಯ 6 ತಿಂಗಳು ಅವರ ಹತ್ರ ಹೋಗಿಲ್ಲ ಅಂದ್ರೆ ಯಾಕೆ ಬಂದಿಲ್ಲ ಅಂತ ಕೇಳಲ್ಲ. ದಿನಾ ಸಿದ್ದರಾಮಯ್ಯ ಹತ್ರ ಹೋದ್ರೆ ಯಾಕಯ್ಯ ಬಂದೆ ಅಂತ ಕೇಳಲ್ಲ. ನಾವೆಲ್ಲ ಸಿದ್ದರಾಮಯ್ಯ ಬಣ ಅಲ್ವಾ? ನಾವೆಲ್ಲ ಯಾಕೆ ಫಾರಿನ್ ಹೋಗ್ತಾ ಇಲ್ಲಾ? ಅಲ್ಲೆಲ್ಲ ಬೈಠಕ್ ಸೇರ್ತಾರೆ ಕೆಲವರು ಬೈಠಕ್ ಅಂದ್ರೆ ದೇಶದ ಬಗ್ಗೆ ಚಿಂತನೆ ಮಾಡುವುದು ಎಂದರ್ಥ ಎಂದು ಸ್ಪಷ್ಟಪಡಿಸಿದ್ರು.
Laxmi News 24×7