Breaking News

ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆ ತುಂಬಿ ಹರಿದಾವು ಪರಾಕ್ – ಮುಳ್ಳುಗದ್ದುಗೆ ಮೇಲೆ ಕುಣಿದು ಕಾರ್ಣಿಕ!

Spread the love

ದಾವಣಗೆರೆ: ಶಿವರಾತ್ರಿ ಪ್ರಯುಕ್ತ ಚನ್ನಗಿರಿ  ತಾಲೂಕಿನ ಕೆಂಗಾಪುರ ಗ್ರಾಮದ ಉತ್ಸವದಲ್ಲಿ ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳುಗದ್ದುಗೆ  ಏರಿ ಕಾರ್ಣಿಕ ನುಡಿದಿದ್ದಾರೆ. ಮುಳ್ಳುಗದ್ದುಗೆ ಏರಿ ಕುಣಿದ ನಂತರ, ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆಗಳು ತುಂಬಿ ಹರಿದಾವು ಪರಾಕ್ ಎಂದು ಸ್ವಾಮೀಜಿ ಕಾರ್ಣಿಕ ನುಡಿದಿದ್ದಾರೆ.

ಈ ಬಾರಿ ಉತ್ತಮ ಮಳೆಯಾಗಿ ಕೆರೆ ತೊರೆಗಳು ತುಂಬಿ ತುಳಕಲಿವೆ. ಉತ್ತಮ ಬೆಳೆ ಬರಲಿದೆ. ಜನರಿಗೆ ಪ್ರಯಾಣದಲ್ಲಿ ಸಾಕಷ್ಟು ದುರಂತ ನಡೆದು, ಸಾವು ನೋವು ಸಂಭವಿಸಲಿದೆ. ಪ್ರಯಾಣದಲ್ಲಿ ನಿಧಾನ ಸೂಕ್ತ, ಇದು ಎಲ್ಲರಿಗೂ ಅನ್ವಯ. ರಾಜಕಾರಣಿಗಳು ಜನಸೇವೆಯಲ್ಲಿ ಹೆಚ್ಚು ತೊಡಗಬೇಕು, ಜನರು ಭೇಷ್ ಎನ್ನಬೇಕು. ರಾಜಕಾರಣಿಗಳು ವೇಗ ಕಡಿಮೆ ಮಾಡಿಕೊಂಡು ಜನಸೇವೆ ಮಾಡುವಂತೆ ಸ್ವಾಮೀಜಿ ಸೂಚಿಸಿದ್ದಾರೆ. ಈ ರೀತಿ ಕಾರ್ಣಿಕದ ತಾತ್ಪರ್ಯ ವಿವರಿಸಿದ್ದಾರೆ.

ಪ್ರತಿ ವರ್ಷ ಶಿವರಾತ್ರಿ ಜಾಗರಣೆ ನಂತರ ಈ ಜಾತ್ರೆ ನಡೆಯುತ್ತದೆ. ಜಾತ್ರೆ ವೇಳೆ ಅದ್ದೂರಿಯಾಗಿ ಮುಳ್ಳುಗದ್ದುಗೆಯ ಉತ್ಸವ ನಡೆಯುತ್ತದೆ. ನೂರಾರು ಭಕ್ತರು ಮುಳ್ಳುಗದ್ದುಗೆ ಉತ್ಸವದಲ್ಲಿ ಭಾಗಿಯಾಗಿದ್ದು, ಸ್ವಾಮೀಜಿಗಳ ದರ್ಶನ ಪಡೆಯುತ್ತಿದ್ದಾರೆ. ಸ್ವಾಮೀಜಿ ಭವಿಷ್ಯ ನಿಜವಾಗಲಿದೆ ಎಂಬುದು ಜನರ ನಂಬಿ


Spread the love

About Laxminews 24x7

Check Also

ವಿಮಾನದಲ್ಲಿ ಬಂದು ಕಾಪರ್ ವೈರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಬೆಂಗಳೂರು ಯಶವಂತಪುರ ಪೊಲೀಸರಿಂದ ಖತರ್ನಾಕ್ ಖದೀಮರ ಬಂಧನ

Spread the loveಮಾಡೋದು ಕಾಪರ್ ಕಳ್ಳತನ ಆದ್ರೆ ಓಡಾಟ ಮಾತ್ರ ವಿಮಾನದಲ್ಲಿ… ಕಳ್ಳತನ ಮಾಡಲು ಯೂನಿಫಾರ್ಮ್ ಹೋಲಿಸಿಕೊಂಡಿದ್ದ ಆರೋಪಿಗಳು ವಿಮಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ