Breaking News

ಶಿವರಾತ್ರಿ ಸಂಭ್ರಮಕ್ಕೆ ಅರಮನೆ ಸಜ್ಜು – ತ್ರಿನೇಶ್ವರನ ಚಿನ್ನದ ಕೊಳಗ ಕಣ್ತುಂಬಿಕೊಳ್ಳಲು ಭಕ್ತರು ಕಾತರ

Spread the love

ಮೈಸೂರು: ಇಲ್ಲಿನ ಅರಮನೆ ಆವರಣದಲ್ಲಿ ಶಿವರಾತ್ರಿ  ಆಚರಣೆಗೆ ಸಿದ್ಧತೆ ಶುರುವಾಗಿದೆ. ಶಿವರಾತ್ರಿ ಪ್ರಯುಕ್ತ ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿಗೆ ಧರಿಸುವ ಚಿನ್ನದ ಮುಖವಾಡವನ್ನ ಸರ್ಕಾರಿ ಖಜಾನೆಯಿಂದ ಹೊರ ತೆಗೆಯಲಾಗಿದೆ.

ವರ್ಷಕೊಮ್ಮೆ ಮಾತ್ರ ಚಿನ್ನದ ಕೊಳಗ ಧಾರಣೆ ಆಗುತ್ತದೆ. ಬರೋಬ್ಬರಿ 11 ಕೆಜಿ ತೂಕದ ಚಿನ್ನದ ಕೊಳಗವಿದು. ಯದುವಂಶದ ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆ ರೂಪದಲ್ಲಿ 1953 ರಲ್ಲಿ ನೀಡಿರುವ ಚಿನ್ನದ ಮುಖವಾಡ ಇದಾಗಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ನೆನಪಿನಾರ್ಥ ಮುಖವಾಡ ಮಾಡಿಸಿಕೊಟ್ಟಿದ್ದರು. ಶಿವರಾತ್ರಿ ಹಬ್ಬದ ದಿನದಂದು ಮಾತ್ರ ದೇವರಿಗೆ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ. ನಂತರ ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿ ಇಡಲಾಗುತ್ತದೆ. ಶಿವರಾತ್ರಿಯ ದಿನ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ.

ದೇವರಿಗೆ ಧಾರಣೆ ಮಾಡುವ ಚಿನ್ನದ ಕೊಳಗವನ್ನ ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ.


Spread the love

About Laxminews 24x7

Check Also

ದಸರಾ ದೀಪಾಲಂಕಾರ 2025: ಆಕರ್ಷಕ ಹಾಗೂ ವಿನೂತನವಾಗಿರಲಿ – ಕೆ. ಎಂ. ಮುನಿಗೋಪಾಲ್‌ ರಾಜು

Spread the loveಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್‌ ದೀಪಾಲಂಕಾರವನ್ನು ಈ ಬಾರಿ ಹೊಸ ವಿನ್ಯಾಸಗಳ ಜತೆಗೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ