ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಅಭಯಾರಣ್ಯದಲ್ಲಿ ಅಪರೂಪದ ವನ್ಯಜೀವಿಗಳ ದರ್ಶನ ಪ್ರವಾಸಿಗರ ಪಾಲಿಗೆ ಹಬ್ಬವಾಗಿ ಪರಿಣಮಿಸಿದೆ. ಕಾಡಿನ ದಟ್ಟ ಹಸಿರಿನ ನಡುವೆ ಬ್ಲಾಕ್ ಪ್ಯಾಂಥರ್ ಹಾಗೂ ಚಿರತೆಯೊಂದು ಒಟ್ಟಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.
ಕಳೆದ ಹತ್ತು ದಿನಗಳಿಂದ ಪದೇಪದೇ ಪ್ರವಾಸಿಗರ ಕಣ್ಣಿಗೆ ದರ್ಶನವನ್ನು ಈ ಎರಡು ಚಿರತೆಗಳು ನೀಡುತ್ತಿವೆ. ಇದರಿಂದ ಕಾಡಿನೊಳಗೆ ಪ್ರವಾಸ ಮಾಡುತ್ತಿರುವ ಪ್ರವಾಸಿಗರು ಸಂತಸಗೊಂಡಿದ್ದಾರೆ. ಸಾಮಾನ್ಯವಾಗಿ ಒಂಟಿಯಾಗಿ ಸಂಚರಿಸುವ ಈ ಪ್ರಾಣಿಗಳು ಇಲ್ಲಿ ಜೊತೆಯಾಗಿ ಸಾಗುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರು ಬೆರಗಾಗಿದ್ದಾರೆ.
Laxmi News 24×7