Breaking News

ಭಾನುವಾರ ಕಾರದಗಾ ಗ್ರಾಮದಲ್ಲಿ ಕನ್ನಡ ಸಮಾವೇಶ:ರಾಜು ಕಿಚಡೆ

Spread the love

ಭಾನುವಾರ ಕಾರದಗಾ ಗ್ರಾಮದಲ್ಲಿ ಕನ್ನಡ ಸಮಾವೇಶ:ರಾಜು ಕಿಚಡೆ
ಚಿಕ್ಕೋಡಿ; ಗಡಿಯಲ್ಲಿ ಕನ್ನಡ ಉಳಿಸಿ, ಬೆಳೆಸಲು ಕಾರದಗಾ
ಕನ್ನಡ ಬಳಗ ವತಿಯಿಂದ ಜನೆವರಿ 4ರಂದು ಗ್ರಾಮದಲ್ಲಿ 8ನೇ ಕನ್ನಡ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಬಳಗದ ಗೌರವಾಧ್ಯಕ್ಷ ರಾಜು ಖಿಚಡೆ ತಿಳಿಸಿದರು.May be an image of text
ನಿಪ್ಪಾಣಿ ತಾಲೂಕಿನ ಕಾರದಗಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಸರ್ವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗುವುದು. ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಕೌಲಗುಡ್ಡದ ಅಮರೇಶ್ವರ ಸ್ವಾಮೀಜಿ, ಚಿಂಚಣಿ ಸಿದ್ಧಸಂಸ್ಥಾನ ಮಠದ ಶಿವಪ್ರಸಾದ ದೇವರು, ಧರೀಖಾನ ಅಜ್ಜ ಸಾನ್ನಿಧ್ಯ ವಹಿಸುವರು. ಬೆಳಗ್ಗೆ ಧ್ವಜಾರೋಹಣ, ಭುವನೇಶ್ವರಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಗ್ರಂಥ ಪೂಜೆ ಹಾಗೂ ಮೆರವಣಿಗೆ ನಡೆಯಲಿದೆ. ಜನಪದ ಕಲಾತಂಡಗಳ ಪ್ರದರ್ಶನ ಹಾಗೂ ಗ್ರಂಥ ಮೆರವಣಿಗೆ ನಂತರ ಸಮಾವೇಶ ಪ್ರಾರಂಭವಾಗಲಿದೆ.May be an image of one or more people and text
ಸಮಾವೇಶದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಚಿಂತನೆ, ಸಾಂಸ್ಕೃತಿಕ ಕಾರ್ಯಕ್ರಮ, ಗ್ರಂಥ ಬಿಡುಗಡೆ ನಡೆಯಲಿದೆ.
ಕಾರ್ಯದರ್ಶಿ ಮಾಣಿಕ ಚಂದಗಡೆ ಮಾತನಾಡಿ, ಗಡಿಯಲ್ಲಿ ಕನ್ನಡ ಸಾಹಿತ್ಯ ಉಳಿಸಿ, ಬೆಳೆಸಲು ಶ್ರಮಿಸಿದ ಗಣ್ಯರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದ್ದು, ಬಿಇಒ ಮಹಾದೇವಿ ನಾಯಿಕ, ಅಭಿಯಂತ ತಾತ್ಯಾಸಾಹೇಬ ಚೌಗುಲೆ, ವೈದ್ಯಕೀಯ ಕ್ಷೇತ್ರದಲ್ಲಿ ಸುದರ್ಶನ ಮುರಾಬಟ್ಟಿ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಂಗಲ ಖೋತ, ಪತ್ರಿಕೋದ್ಯಮದಲ್ಲಿ ಸುಧೀರ ಕುಂಭೋಜಕರ, ಸಾಹಿತ್ಯ ಕ್ಷೇತ್ರದಲ್ಲಿ ಶಿವಾನಂದ ಭಾಗಾಯಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವೀರೇಂದ್ರ ಖೋತ, ಸಂಜಯ ಗಾವಡೆ, ಮಹಾವೀರ ಪಾಟೀಲ, ಬಾಬಾಸಾಹೇಬ ನಾಡಗೆ, ಶಶಿಕಾಂತ ಅಥಣಿಕರ, ನಿವೇದಿತಾ ಅಥಣಿಕರ, ಶಕುಂತಲಾ ಕಮತೆ, ಸುಭಾಷ ಠಕಾಣೆ, ಸಂತೋಷ ಜತ್ರಾಟೆ, ಮಹಾದೇವ ಡಾಂಗೆ ಇತರರಿದ್ದರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ