Breaking News

ವೋಟ್ ಚೋರಿ ಹೋರಾಟ ಯಶಸ್ವಿ ಆಗಿದ್ದು, ದೇಶಕ್ಕೆ ಒಂದು ಸಂದೇಶ ಹೋಗಿದೆ: ಡಿ.ಕೆ. ಶಿವಕುಮಾರ್

Spread the love

ವೋಟ್ ಚೋರಿ ಹೋರಾಟ ಯಶಸ್ವಿ ಆಗಿದ್ದು, ದೇಶಕ್ಕೆ ಒಂದು ಸಂದೇಶ ಹೋಗಿದೆ: ಡಿ.ಕೆ. ಶಿವಕುಮಾರ್

ಬೆಳಗಾವಿ: ಪಕ್ಷದ ಸಂಸದೆ ಪ್ರಿಯಾಂಕಾ ಗಾಂಧಿ ಅವರು ವಿವಿ ಪ್ಯಾಟ್​ ಬದಲು ಮತ್ತೆ ಬ್ಯಾಲೆಟ್ ಪೇಪರ್‌ಗೆ ಹೋಗಬೇಕು ಎಂದು ಆಗ್ರಹಿಸಿದರು.‌ ಅದರ ಮುಖಾಂತರ ಗೊತ್ತಾಗುತ್ತದೆ. ನಿನ್ನೆಯ ವೋಟ್ ಚೋರಿ ಹೋರಾಟ ಬಹಳ ಯಶಸ್ವಿಯಾಗಿದೆ. ನಮ್ಮ ಪ್ರತಿಭಟನೆ ದೇಶಕ್ಕೆ ಒಂದು ಸಂದೇಶ ಕೊಟ್ಟಿದೆ. ರಾಜ್ಯದ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್​ ಹೇಳಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಜೊತೆಗೆ ಮಾತನಾಡಿದ ಅವರು, ಒಂದು ಗಮನಿಸಿಬೇಕು ನಮ್ಮ ರಾಜ್ಯದಿಂದ 4 ಸಾವಿರ ಜನ ಬಂದಿದ್ದರು. ಒಬ್ಬೊಬ್ಬರು 20ರಿಂದ 50 ಸಾವಿರ ರೂಪಾಯಿ ಖರ್ಚು ಮಾಡಿಕೊಂಡು ಬಂದಿದ್ದರು. ನಾವು ಪ್ರತಿಭಟನೆಗೆ ಬಂದವರಿಗೆ ಯಾವುದೇ ಅಧಿಕಾರ ಕೊಟ್ಟಿಲ್ಲ. ದೇಶದ ಪ್ರಜಾಪ್ರಭುತ್ವ ಉಳಿಸಬೇಕು, ದೇಶದಲ್ಲಿ ಆಗುತ್ತಿರುವ ಅನ್ಯಾಯ ತಡೆಯಲು ಆಸಕ್ತಿಯಿಂದ ಅವರು ಬಂದಿದ್ದರು. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಹೋರಾಟ ನಡೆದಿದೆ ಎಂದರು.

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಭೇಟಿ ಮಾಡಿರುವ ವಿಚಾರಕ್ಕೆ‌ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನೀವೇ ನೋಡಿದರಲ್ಲ ಫೋಟೋಗಳಲ್ಲಿ ಎಂದರು. ಕರ್ನಾಟಕ ರಾಜಕೀಯ ಬಗ್ಗೆ ಚರ್ಚೆ ಆಯ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಕರ್ನಾಟಕದ ಬಗ್ಗೆ ಚರ್ಚೆ ಆಗಿರೋದನ್ನು ಮಾಧ್ಯಮದವರ ಮುಂದೆ ಹೇಳಲು ಆಗುತ್ತಾ ಎಂದು ಮರು ಪ್ರಶ್ನಿಸಿದರು.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ