Breaking News

ಪಂಢರಪುರಕ್ಕೆ ಪಾದಯಾತ್ರೆ ಬೆಳೆಸಿದ ಗೋವಾ ಉಸ್ತೆ ವಾರಕರಿಗಳು….

Spread the love

ಪಂಢರಪುರಕ್ಕೆ ಪಾದಯಾತ್ರೆ ಬೆಳೆಸಿದ ಗೋವಾ ಉಸ್ತೆ ವಾರಕರಿಗಳು….
ಪಾಂಡುರಂಗನ ಭಕ್ತಿ ಅಪಾರವಾಗಿದ್ದು, ಆತನ ಭಕ್ತರು ಕೇವಲ ಮಹಾರಾಷ್ಟ್ರವಲ್ಲದೇ, ಪಕ್ಕದ ಕರ್ನಾಟಕ, ಗೋವಾದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗೋವಾದ ಉಸ್ತೆ ಗ್ರಾಮದಿಂದ ಪಾಯಿದಿಂಡಿ ಹೊರಟ ವಿಠ್ಠಲ ಭಕ್ತರ ವಾರಿ ಇದಕ್ಕೆ ಸಾಕ್ಷಿಯಾಗಿದೆ.
ಆಷಾಢ ಏಕಾದಶಿ ಬಂತೆಂದರೇ ಸಾಕು ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಾಳ ಮೃದಂಗದ ನಿನಾದ ಮತ್ತು ಹರಿನಾಮ ಘೋಷಣೆ ಕೇಳಿ ಬರುತ್ತದೆ. ಜಗತ್ತಿನಾದ್ಯಂತ ಅಸಂಖ್ಯ ಭಕ್ತರನ್ನು ಹೊಂದಿದ ಪಾಂಡುರಂಗನ ಭಕ್ತರು ಕರ್ನಾಟಕ, ಗೋವಾದಲ್ಲಿಯೂ ಅತಿಯಾಗಿದ್ದಾರೆ.
ಆಷಾಢ ಏಕಾದಶಿಯಂದು ಪಾದಯಾತ್ರೆ ಕೈಗೊಂಡು ಮಹಾರಾಷ್ಟ್ರದ ಪಂಢರಪುರಕ್ಕೆ ಪ್ರಯಾಣ ಬೆಳೆಸುತ್ತಾರೆ. ಇಂದು ಗೋವಾ ರಾಜ್ಯದ ಉಸ್ತೆ ಗ್ರಾಮದ ವಾರಕರಿಗಳು ಬೆಳಗಾವಿ ಮೂಲಕ ಪಂಢರಪುರಕ್ಕೆ ಪ್ರಯಾಣ ಬೆಳೆಸಿದರು.
ಬೆಳಗಾವಿಯ ಈ ಸಂದರ್ಭದಲ್ಲಿ ರಾಣಿ ಅಗಸಿಮಣಿ, ವೃಷಾಲಿ ಮೋರೆ, ಶೀಲಾ ಕಾರ್ಲೇಕರ, ರಾಣಿ ಕಾಕಡೆ, ಜ್ಯೋತಿ ಪಾಟೀಲ್ ಸೇರಿದಂತೆ ಹಲವರು ವಾರಿಯನ್ನು ಸ್ವಾಗತಿಸಿ ಭಕ್ತಿಪೂರ್ಣವಾಗಿ ನಮಿಸಿದರು.
ವರ್ಷಾನು ವರ್ಷಗಳಿಂದ ನಡೆದುಕೊಂಡ ಬಂದು ವಾರಕರಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ದಾರಿಯುದ್ಧಕ್ಕೂ ಹರಿನಾಮ ವಿಠುನಾಮವನ್ನು ಭಜಿಸುತ್ತ ನಮ್ಮ ದಿಂಡಿ ಪಂಢರಪುರಕ್ಕೆ ತಲುಪುತ್ತದೆ. ಮಾರ್ಗ ಮಧ್ಯದಲ್ಲಿ ಹಲವಾರು ಭಕ್ತರು ನಮ್ಮನ್ನು ಸ್ವಾಗತಿಸುತ್ತಾರೆ.
ಉಪಹಾರ, ಭೋಜನ ವ್ಯವಸ್ಥೆಯನ್ನು ಮಾಡಿ ಸಹಾಯ ಮಾಡುತ್ತಾರೆ. ವಾರಿಯಲ್ಲಿ ಸಾಕ್ಷಾತ್ ಪಾಂಡುರಂಗನಿರುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ಜೂನ್ 24 ರಿಂದ ಪಾಯಿದಿಂಡಿ ಅರ್ಥಾತ್ ಪಾದಯಾತ್ರೆ ಆರಂಭಗೊಂಡಿದ್ದು, ಏಕಾದಶಿಯ 2 ದಿನದ ಮೊದಲು ಅಂದರೇ ಜುಲೈ 4 ರಂದು ಪಂಢರಪುರಕ್ಕೆ ತಲುಪುತ್ತೇವೆ ಎಂದು ಗೋವಾದ ಉಸ್ತೆ ಗ್ರಾಮದ ವಾರಕರಿ ಪ್ರಮುಖರು ಇನ್ ನ್ಯೂಸ್’ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾರಕರಿಗಳು ಭಾಗಿಯಾಗಿದ್ಧರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ