Breaking News

ಜಾಮೀನಿಗಾಗಿ ನಕಲಿ ಆಧಾರ್, ಆರ್‌ಟಿಸಿ ಸಲ್ಲಿಕೆ: ಪತ್ತೆ ಹಚ್ಚಿದ ಕಾರವಾರ ನ್ಯಾಯಾಧೀಶರು

Spread the love

ಕಾರವಾರ(ಉತ್ತರ ಕನ್ನಡ): ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಆರ್‌ಟಿಸಿ (ಕಂದಾಯ ದಾಖಲೆಗಳು) ಬಳಸಿ ನ್ಯಾಯಾಲಯಕ್ಕೆ ವಂಚನೆ ಮಾಡಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ದೊಡ್ಡ ಜಾಲವೊಂದನ್ನು ಕಾರವಾರದ ನ್ಯಾಯಾಧೀಶರು ಪತ್ತೆ ಹಚ್ಚಿದ್ದಾರೆ. ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅವರ ಸಮಯೋಚಿತ ಕಾರ್ಯದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

ಕಡಬದ ಮಹಿಳೆ ಪಿ.ಸಿ.ಅಲೈಸ್ ಕುರಿಯನ್ ಚಾಕು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆ ನಕಲಿ ಆಧಾರ್ ಮತ್ತು ಆರ್‌ಟಿಸಿ ದಾಖಲೆಗಳನ್ನು ಬಳಸಿ ಎಂಟು ಕಡೆಗಳಲ್ಲಿ ಜಾಮೀನು ನೀಡಿದ್ದರು ಎಂದು ತಿಳಿದು ಬಂದಿದೆ. ಆರೋಪಿ ಮಹಿಳೆ ಜೊತೆ ಇಬ್ಬರು ವ್ಯಕ್ತಿಗಳು ಕೂಡ ನಕಲಿ ದಾಖಲೆಗಳನ್ನು ನೀಡುವಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಘಟನೆ ನಡೆದದ್ದು ಹೀಗೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಶಿರಸಿಯ ವ್ಯಕ್ತಿಯೊಬ್ಬರಿಗೆ ಜಾಮೀನು ಕೊಡಿಸಲು ಕಡಬದ ಮಹಿಳೆ ಅಲೈಸ್ ಕುರಿಯನ್ ಚಾಕು ನ್ಯಾಯಾಲಯಕ್ಕೆ ಬಂದಿದ್ದರು. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರಿಗೆ ಅನುಮಾನ ಬಂದಿದೆ. ತಕ್ಷಣವೇ ತನಿಖೆ ನಡೆಸಿದಾಗ ಈ ಬೃಹತ್ ನಕಲಿ ದಾಖಲೆ ಜಾಲದ ಕುರಿತು ಸತ್ಯಾಂಶ ಬಯಲಾಗಿದೆ.ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ರವೀಂದ್ರ ಆರ್.ನಾಯ್ಕ ಅವರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ನಕಲಿ ದಾಖಲೆಗಳನ್ನು ನೀಡಿದ ಮಹಿಳೆಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೆ, ಈ ನಕಲಿ ದಾಖಲೆ ಜಾಲವನ್ನು ಸಂಪೂರ್ಣವಾಗಿ ಭೇದಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಅಲೈಸ್ ಕುರಿಯನ್ ಚಾಕು ಅವರೊಂದಿಗೆ ಬಂದಿದ್ದ ಇಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ