Breaking News

ಪರೀಕ್ಷೆ ಬರೆಯುವ ಮೂಲಕ ಭವ್ಯ ಪ್ರಜೆಗಳಾಗಿ ಎಂದು ಚಿಕ್ಕೋಡಿ ಉಪನಿಧೇಶಕರ ಕಛೇರಿಯ ಶಿಕ್ಷಣಾಧಿಕಾರಿ ಅನಿಲಕುಮಾರ ಗಂಗಾಧರ ಹೇಳಿದರು.

Spread the love

ಮೂಡಲಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಿಯಮಾನುಸಾರ ನಡಿಯುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ರೀತಿ ಪರೀಕ್ಷೆ ಬರೆಯುವ ಮೂಲಕ ಭವ್ಯ ಪ್ರಜೆಗಳಾಗಿ ಎಂದು ಚಿಕ್ಕೋಡಿ ಉಪನಿಧೇಶಕರ ಕಛೇರಿಯ ಶಿಕ್ಷಣಾಧಿಕಾರಿ ಅನಿಲಕುಮಾರ ಗಂಗಾಧರ ಹೇಳಿದರು.

ಶಿವಾಪೂರ (ಹ), ಖಾನಟ್ಟಿ, ಪಟಗುಂದಿ, ಮೂಡಲಗಿಯಲ್ಲಿ ಗುರುವಾರ ಜರುಗಿದ ಎಸ್.ಎಸ್.ಎಲ್.ಸಿಯ ಕನ್ನಡ ಭಾಷಾ ಪರೀಕ್ಷೆಯ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದರು.

ಮೂಡಲಗಿ ತಾಲೂಕಿನಲ್ಲಿ ಪರೀಕ್ಷೆಗಳಲ್ಲಿ ಸರ್ಕಾರದ ನಿಯಮ ಪಾಲಿಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ದೈಹಿಕ ಅಂತರ, ಸ್ಕ್ರಿನಿಂಗ್, ಮಾಸ್ಕ್, ಸಿಸಿ ಕ್ಯಾಮರಾ ಹಾಗೂ ಅಗತ್ಯ ಆರೋಗ್ಯ ನೀಡಲಾಗುತ್ತಿದೆ ಎಂದರು.

ಮೂಡಲಗಿ ಬಿಇಒ ಅಜಿತ ಮನ್ನಿಕೇರಿಯವರು ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಾದ ಮೆಳವಂಕಿ, ಸುಣಧೋಳಿ, ಕುಲಿಗೊಡ, ಪಟಗುಂದಿಗಳಿಗೆ ಭೇಟಿ ನೀಡಿ ಪರೀಕ್ಷಾ ಮೆಲ್ವಿಚಾರಣೆ ಮಾಡಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಡೈಟ್‍ನ ಉಪನ್ಯಾಸಕ ಸಂಜಯ ಯಾದಗೂಡೆ, ಪ್ರಭಾರ ಡಿವೈಪಿಸಿ ಸದಾಶಿವ ಹಚಡದ, ಪರೀಕ್ಷಾ ಅಧಿಕ್ಷಕರಾದ ಶ್ರೀಕಾಂತ ಗುಗ್ಗರಿ, ಕೆ.ಎಸ್ ಭಜಂತ್ರಿ, ಎ.ಆರ್ ಶೇಗುಣಸಿ, ಎಸ್.ಎಸ್.ಎಲ್.ಸಿ ಪರೀಕ್ಷಾ ನೊಡಲ್ ಸತೀಶ ಬಿ.ಎಸ್, ಇಸಿಒ ಟಿ ಕರಿಬಸವರಾಜು, ಬಿಆರ್‍ಪಿ ಗೋಪಾಲ ಪತ್ತಾರ, ಕೆ.ಎಲ್ ಮೀಶಿ ಹಾಜರಿದ್ದರು.


Spread the love

About Laxminews 24x7

Check Also

ಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ

Spread the loveಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌  ಅವರ ಮತವನ್ನು ಅಸಿಂಧುಗೊಳಿಸಬೇಕೆಂಬ ಕಾಂಗ್ರೆಸ್‌ ಆಕ್ಷೇಪವನ್ನ ಚುನಾವಣಾಧಿಕಾರಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ