ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಯ ಪ್ರಚಾರಕ್ಕೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ. ಕರುನಾಡಿನ ಖ್ಯಾತ ಉತ್ಪನ್ನಕ್ಕೆ ಕನ್ನಡೇತರ ನಟಿಯನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿರೋದು ಬಹುತೇಕರ ಆಕ್ರೋಶಕ್ಕೂ ಕಾರಣವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೂಡಾ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಟಿ ರಮ್ಯಾ ಎಕ್ಸ್ ಪೋಸ್ಟ್: ”ಕೆಎಸ್‌ಡಿಎಲ್ ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಶ್ಲಾಘಿಸುತ್ತೇನೆ. ಆದರೆ, ಅದನ್ನು ಕಾರ್ಯಗತಗೊಳಿಸುವಿಕೆಯು ವಾಸ್ತವವಾಗಿಲ್ಲ. ವ್ಯವಹಾರದ ದೃಷ್ಟಿಕೋನದಿಂದ ನೋಡಿದರೂ, ವಿಶೇಷವಾಗಿ ಕಂಪನಿಯು ಕ್ಷೀಣಿಸುತ್ತಿರುವಾಗ, ಮೈಸೂರು ಸ್ಯಾಂಡಲ್ ಸೋಪ್ ಐಕಾನಿಕ್ ಆಗಿದ್ದು, ದೊಡ್ಡ ಪರಂಪರೆ ಹೊತ್ತೊಯ್ಯುತ್ತದೆ. ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಅಗತ್ಯವಿಲ್ಲ (ಅಮುಲ್, ಆಪಲ್, ಡವ್, ಅಮೆಜಾನ್)”.’ಉತ್ತರದ ಗ್ರಾಹಕರನ್ನು ಸೆಲೆಯಲು ಕನ್ನಡೇತರ ವ್ಯಕ್ತಿಯನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ತೆಗೆದುಕೊಳ್ಳುವ ಮೂಲಕ ಅವರು ತಮ್ಮದೇ ಆದ ಜನರನ್ನು, ಅಂದರೆ ತಮ್ಮ ಮೂಲ ನಿಷ್ಠಾವಂತ ಗ್ರಾಹಕ ನೆಲೆಯಾದ ಕನ್ನಡಿಗನನ್ನು ದೂರವಿಟ್ಟಿದ್ದಾರೆ. ನಾವು ನಮ್ಮ ಕನ್ನಡದ ಹೆಮ್ಮೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಈ ಸಮಯದಲ್ಲಿ ಈ ಪ್ರಯತ್ನ ನಮ್ಮನ್ನೇ ಸೋಲಿಸುತ್ತದೆ”.
Laxmi News 24×7