ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಇಲಾಕೆ ಸಚಿವರು
ಎಲ್ಲ ಸಾಧಕ ಬಾದಕ ಗಳನ್ನು ಗಮನದಲ್ಲಿ ತೆಗೆದುಕೊಂಡು ಅಧಿಕಾರಿಗಳ ಒಂದುಚರಿಸಿ ಟಿಕಿಟ್ ದರ ಏರಿಕೆ ಬಗ್ಗೆ ತೆಗೆದುಕೊಂಡ ನಿರ್ಣಯ ಸರಿ ಇದೆ. ಮಹಿಳೆಯರಿಗಾಗಿ ನೀಡಿರುವ ಉಚಿತ ಸಾರಿಗೆ ವ್ಯವಸ್ಥೆ ಎಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ಅನೇಕ ವರ್ಷಗಳಿಂದ ದೊರೆ ಏರಿಕೆ ಬಗ್ಗೆ ನಿರ್ಣಯ ಕೈಗೊಂಡಿಲ್ಲ ಇದು ಅನಿವಾರ್ಯವಾಗಿತ್ತು. ಎಂದು. ಕಾಗವಾಡ ಕ್ಷೇತ್ರ ಶಾಸಕರು ಹಾಗೂ ವಾಯುವ್ಯ ಸಾರಿಗೆ ಇಲಾಖೆಯ ಅಧ್ಯಕ್ಷ ರಾಜು ಕಾಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬಸ್ ಟಿಕೇಟ್ ದರ ಏರಿಕೆ ವಿಚಾರವಾಗಿ
ಶಾಸಕ ರಾಜು ಕಾಗೆ ಇವರ ಉಗಾರದಲ್ಲಿಯ ಶಾಸಕರ ಪ್ರಧಾನ ಕಚೇರಿಯಲ್ಲಿ ಇನ್ ವಾಹಿನಿ ದೊಂದಿಗೆ ಮಾತನಾಡುವಾಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಳೆದ ಎಳೆಂಟು ವರ್ಷಗಳಿಂದ ಬಸ್ ಟಿಕೇಟ್ ದರ ಏರಿಕೆಯಾಗಿಲ್ಲ
ಡಿಸೇಲ್, ಆಯಿಲ್, ಟಾಯರ ಹಾಗೂ ಬಿಡಿ ಭಾಗಗಳ ದರ ಏರಿಕೆಯಾಗಿದೆ ಇದರಿಂದ
ಅನಿವಾರ್ಯವಾಗಿ ಟಿಕೇಟ್ ದರ ಏರಿಕೆ ಮಾಡಲಾಗಿದೆ. ಅಧ್ಯಕ್ಷರು ಹೇಳಿದರು.
*ಪ್ರತಿ ದಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಂದು ಕೋಟಿ ಹಾನಿಯಲ್ಲಿದೆ*
ಹೊಸ ಬಸ್‌ಗಳನ್ನ ಈಗಾಗಕೇ ಖರೀದಿ ಮಾಡಿದ್ದೇವೆ
ಕಳೆದ ಐದಾರು ವರ್ಷಗಳಿಂದ ಬಸ್ ಖರೀದಿ ಮಾಡಿಲ್ಲ
ಈಗ ಐದನೂರು ಹೊಸ ಬಸ್ ಖರೀದಿ ಮಾಡಿದ್ದೇವೆ
ಡಿಸೇಲ್ 50ರೂ ಇದ್ದಾಗ ಇದ್ದ ಟಿಕೇಟ್ ದರ ಇದೇ ಇತ್ತು ಆದರೆ, ಈಗ ಡಿಸೇಲ್ ದರ ನೂರು ಸಮೀಪ ಇದ್ದರು ಏರಿಕೆ ಯಾಗಿದೆ ಇರುವುದರಿಂದ ಇಲಾಖೆ ಆರ್ಥಿಕ ಹಾನಿಯಲ್ಲಿದೆ. ಇಲಾಖೆಯ ಗ್ಯಾಲಕ್ಸಿಬ್ಬಂದಿಗಳ ಸಂಬಳ ಮತ್ತು ಖರ್ಚು ವೆಚ್ಚಗಳನ್ನು ಹೊಂದಾಣಿಕೆ ಮಾಡುವುದು ಕಷ್ಟವಾಗಿತ್ತು ಇದರಿಂದ ಟಿಕೆಟ್ ದರ ಮುಖ್ಯಮಂತ್ರಿಗಳು ಏರಿಕೆ ಮಾಡುವ ನಿರ್ಣಯ ಕೈಗೊಂಡಿದ್ದಾರೆ ಎಂದು ಶಾಸಕರು ಹೇಳಿದರು.
ಸರ್ಕಾರ ಶೇಕಡಾ 15ರಷ್ಟು ದೊರೆ ಏರಿಕೆ ಮಾಡಿದ್ದಾರೆ.. ಸದ್ಯಕ್ಕೆ ಆಗಿರುವ ಹಾನಿ ತುಂಬಿಕೊಂಡು ಆದಾಯದಲ್ಲಿ ಬರುವ ವ್ಯವಸ್ಥೆ ಸದ್ಯಕ್ಕೆ ಆಗುವುದಿಲ್ಲ. ಎಂದು ಹೇಳಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಈ ಸಂಸ್ಥೆ ಹಾನಿಯಲ್ಲಿ ತೆಗೆದುಕೊಂಡು ಹೋಗಿದ್ದರು. ಸಾಕಷ್ಟು ಸಾಲ ಮಾಡಿದ್ದಾರೆ. ಎಂದು ಹೇಳಿ
ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸೊದ ಈಗ ಅವರು ನಾವು ಏರಿಸಿದ ದರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಮಾಡುವುದು ಸೂಕ್ತ ಅಲ್ಲ ಮತ್ತು ಅವರಿಗೆ ನೈತಿಕ ಅಧಿಕಾರವೂ ಇಲ್ಲ ಎಂದು ಅಧ್ಯಕ್ಷ ರಾಜು ಕಾಗೆ ಆಕ್ರೋಶ ಅವರ ಹಾಕಿದರು.
ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಒಳ್ಳೆಯ ಆಡಳಿತ ನೀಡುತ್ತಿದ್ದು ಪಂಚ್ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಮಹಿಳೆಯರು ಪಕ್ಷದ ಪರ ಅಭಿಪ್ರಾಯ ವ್ಯಕ್ತಪಡಿಸುವುದರಿಂದ ಬಿಜೆಪಿ ಪಕ್ಷದವರು ಸುಳ್ಳು ಆರೋಪಗಳನ್ನು ಮಾಡುತ್ತಾ ತಮ್ಮ ಹೊಟ್ಟೆಕಿಚ್ಚು ತೋರಿಸಿತ್ತಿದ್ದಾರೆ ಎಂದು ಶಾಸಕರಾಜು ಕಾಗೆ ಅಭಿಪ್ರಾಯ ವ್ಯಕ್ತಪಡಿಸಿದರು.
Laxmi News 24×7