Breaking News

ರುದ್ರೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರ ಮೇಲೆ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾ

Spread the love

ಬೆಳಗಾವಿ ತಹಶಿಲ್ದಾರ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರ ಮೇಲೆ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಎ1 ತಹಶಿಲ್ದಾರ ಬಸವರಾಜ ನಾಗರಾಳ, ಎ2 ಅಶೋಕ ಕಬ್ಬಲಿಗೇರ್, ಎ3 ಸೋಮು ಅಂತಾ. ಮೊದಲು ಇನ್ಸ್ಪೆಕ್ಟರ್ ತನಿಖಾಧಿಕಾರಿ ಆಗಿದ್ದರು. ಆದ್ರೆ ಈಗ ಎಸಿಪಿಯನ್ನ ತನಿಖಾಧಿಕಾರಿ ಮಾಡಿದ್ದೇನೆ. ಪ್ರಕರಣ ತುಂಬಾ ಸೆನ್ಸಿಟಿವ್ ಇದೆ. ತನಿಖೆ ಆರಂಭಿಸಿ ಕೆಲವೊಂದಿಷ್ಟು ಜನರ ಹೇಳಿಕೆ ಪಡೆದಿದ್ದೇವೆ.

ಬೇರೆ ಡಿಪಾರ್ಟ್ಮೆಂಟ್ ನಿಂದ ತಹಶಿಲ್ದಾರ, ಎಸಿ ಕಚೇರಿಯಿಂದ ಮಾಹಿತಿ ಕೇಳಿದ್ದೇವೆ ಎಂದರು‌.
ರುದ್ರೇಶ್ ಮೊಬೈಲ್ ಅವರ ಮನೆಯಲ್ಲಿದೆ, ಅದನ್ನ ಪೊಲೀಸರಿಗೆ ಒಪ್ಪಿಸುವಂತೆ ಕುಟುಂಬಸ್ಥರಿಗೆ ಸೂಚಿಸಿದ್ದೇವೆ. ಮೊಬೈಲ್ ಅನ್ನ ಎಫ್ಎಸ್‌ಎಲ್‌ ಗೆ ಕಳುಹಿಸುತ್ತಿದ್ದೇವೆ. ಆಗ ನಮಗೆ ನಿಖರವಾದ ಮಾಹಿತಿ ಸಿಗಲಿದೆ. ರುದ್ರೇಶ್ ಕೊನೆಯ ಬಾರಿಗೆ ಯಾರೊಂದಿಗೆ ಮಾತನಾಡಿದ್ದನ್ನ ಪರಿಶೀಲನೆ ಮಾಡ್ತಿದ್ದೇವೆ ಎಂದರು‌
ಸಿಸಿಟಿವಿ ದೃಶ್ಯಗಳನ್ನ ನಾವು ಕಲೆ ಹಾಕ್ತಿದ್ದೇವೆ.

ಬ್ಯಾಂಕ್ ಸ್ಟೇಟ್ ಮೆಂಟ್ ಚೆಕ್ ಮಾಡಬೇಕಿದೆ. ಆಫೀಸ್‌ ವಾಟ್ಸಪ್ ಗ್ರುಪ್ ನಲ್ಲಿ ಮೇಸೆಜ್ ಹಾಕಿದ್ದಾರೆ. ನಾವು ಮೇಸೆಜ್ ಸ್ಕ್ರೀನ್ ಶಾಟ್ ನೋಡಿದ್ದೇವೆ. ಮೊಬೈಲ್ ಸಿಕ್ಕ ಬಳಿಕ ಎಲ್ಲವೂ ಗೊತ್ತಾಗಲಿದೆ.
ಇದರಲ್ಲಿ ಸಚಿವರ ಪಿಎ ಸೋಮು ಇರುವುದಾಗಿ ಹೇಳುತ್ತಿದ್ದಾರೆ.
ಅದನ್ನ ನಾವು ಚೆಕ್ ಮಾಡ್ತಿದ್ದೇವೆ ಎಂದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ