ಶಿಕ್ಷಣ ಕ್ಷೇತ್ರಕ್ಕೆ ಒತ್ತು: ಐಹೊಳೆ

Spread the love

ರಾಯಬಾಗ: ‘ಮತಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕ ಒತ್ತು ನೀಡಿ, ಸರ್ಕಾರಿ ಶಾಲೆಯಲ್ಲಿ ಕಲಿಯುವ ಎಲ್ಲ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಶಾಸಕ ಡಿ.ಎಂ ಐಹೊಳೆ ಹೇಳಿದರು.

ತಾಲ್ಲೂಕಿನ ಮೇಖಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬುಧವಾರ ₹68 ಲಕ್ಷ ಅನುದಾನದಲ್ಲಿ ಮಂಜೂರಾದ ನಾಲ್ಕು ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಹಾಗೂ ದಿಗ್ಗೇವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ₹18 ಲಕ್ಷ ಅನುದಾನದಲ್ಲಿ ಒಂದು ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.‌

‘ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿರುವ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಅಭಿವೃದ್ಧಿ ಪಡಿಸುವೆ’ ಎಂದರು.

ಪಿ.ಎ ನಾಯಿಕ, ಸಿದ್ದು ಕಾಂಬಳೆ, ಸಂಜು ಒಡೆಯರ, ಸಂಜು ನಾಯಿಕ, ಸುನೀಲ ಖಿಚಡೆ, ಬಸವರಾಜ ಡೋಣವಾಡೆ, ರವಿ ಚೌಗುಲಾ, ಲಕ್ಷ್ಮಣ ಚೌಗುಲಾ, ಶ್ರವಣ ಕಾಂಬಳೆ, ವೈ. ಆರ್.ಕಾಂಬಳೆ ಇದ್ದರು.


Spread the love

About Laxminews 24x7

Check Also

ಈಶ್ವರ್ ಖಂಡ್ರೆಗೆ ಅವಾಚ್ಯವಾಗಿ ನಿಂದಿಸಿದ ಭಗವಂತ ಖೂಬಾಗೆ ನೋಟಿಸ್

Spread the loveಬೀದರ್: ಸಚಿವ ಈಶ್ವರ್ ಖಂಡ್ರೆಗೆ ಅವಾಚ್ಯವಾಗಿ ನಿಂದಿಸಿದ ಕೇಂದ್ರ ಸಚಿವ ಭಗವಂತ ಖೂಬಾಗೆ ಎರಡು ನೋಟಿಸ್ ನೀಡಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ